ಕಾರ್ನಾಡ್‌, ರೈ ವಿರುದ್ಧ ಕ್ರಮಕ್ಕೆ ಆಗ್ರಹ

7

ಕಾರ್ನಾಡ್‌, ರೈ ವಿರುದ್ಧ ಕ್ರಮಕ್ಕೆ ಆಗ್ರಹ

Published:
Updated:

ಚಿಕ್ಕಮಗಳೂರು: ‘ಬೆಂಗಳೂರಿನಲ್ಲಿ ಬುಧವಾರ ನಡೆದ ಗೌರಿ ದಿನ ಆಚರಣೆಯಲ್ಲಿ ಕೆಲವರು ‘ನಾನೂ ನಗರ ನಕ್ಸಲ್‌’ ಫಲಕ ಹಾಕಿಕೊಂಡಿದ್ದು ಕಾನೂನುಬಾಹಿರ. ಈ ಚಟುವಟಿಕೆ ಮಾಡಿದ ಗಿರೀಶ್‌ ಕಾರ್ನಾಡ್‌, ಪ್ರಕಾಶ್‌ ರೈ, ರಹಮತ್‌ ತರೀಕೆರೆ ವಿರುದ್ಧ ಸರ್ಕಾರ ಸ್ವಯಂಪ್ರೇರಿತ ದೂರು ದಾಖಲಿಸಬೇಕು’ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಒತ್ತಾಯಿಸಿದರು.

ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಕ್ಸಲ್‌ ನಿಷೇಧಿತ ಸಂಘಟನೆ. ಈ ಸಂಘಟನೆ ಪರವಾಗಿರುವುದು ಅಪರಾಧ. ನಕ್ಸಲರ ಹದ್ದುಬಸ್ತಿಗೆ ಸರ್ಕಾರವು ವಿಶೇಷ ಪಡೆಯನ್ನೇ ರಚಿಸಿದೆ. ನಗರ ನಕ್ಸಲರು ಕಾಡಿನಲ್ಲಿರುವ ನಕ್ಸಲರಿಗೆ ಆಹಾರ, ಶಸ್ತ್ರಾಸ್ತ್ರ ಪೂರೈಸುತ್ತಾರೆ ಎಂಬ ಸಂಶಯ ಇದೆ. ಅವರನ್ನು ವಿಚಾರಣೆ ಮಾಡಬೇಕು’ ಎಂದು ಆಗ್ರಹಿಸಿದರು.

ಇದನ್ನೂ ಓದಿ...

‘ನಗರ ನಕ್ಸಲ’ ಘೋಷಿಸಿಕೊಂಡ ಕಾರ್ನಾಡ್‌

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !