ತಾಳ್ಮೆ ಕಳೆದುಕೊಂಡ ಪ್ರತಾಪಸಿಂಹ

ಮಂಗಳವಾರ, ಏಪ್ರಿಲ್ 23, 2019
33 °C

ತಾಳ್ಮೆ ಕಳೆದುಕೊಂಡ ಪ್ರತಾಪಸಿಂಹ

Published:
Updated:
Prajavani

ಮೈಸೂರು: ಖಾಸಗಿ ಸುದ್ದಿ ವಾಹಿನಿ ಶುಕ್ರವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪಸಿಂಹ ಅವರು ತಾಳ್ಮೆ ಕಳೆದುಕೊಂಡು ಕಾಂಗ್ರೆಸ್‌ ಕಾರ್ಯಕರ್ತನ ವಿರುದ್ಧ ರೇಗಾಡಿದ್ದಾರೆ.

ಸಂವಾದದಲ್ಲಿ ಪ್ರತಾಪಸಿಂಹ ಅಲ್ಲದೆ ಕಾಂಗ್ರೆಸ್‌, ಬಿಎಸ್‌ಪಿ ಪಕ್ಷಗಳ ಪ್ರತಿನಿಧಿಗಳು ಇದ್ದರು. ಕಾಂಗ್ರೆಸ್‌ ಕಾರ್ಯಕರ್ತರೊಬ್ಬರು, ‘ಬಿಜೆಪಿಯವರು ಹಿಂದುತ್ವ.. ಹಿಂದುತ್ವ ಎನ್ನುತ್ತಾರೆ. ಹಿಂದುತ್ವವನ್ನು ನೀವು ಗುತ್ತಿಗೆ ತೆಗೆದುಕೊಂಡಿದ್ದೀರಾ, ಅದು ನಿಮ್ಮ ಅಪ್ಪನ ಮನೆ ಆಸ್ತಿನಾ’ ಎಂದು ಪ್ರಶ್ನಿಸಿದ್ದಾರೆ.

ಇದರಿಂದ ಕೋಪಗೊಂಡ ಸಂಸದರು ವೇದಿಕೆಯಿಂದ ಕೆಳಗಿಳಿದು ಬಂದು ಆ ಕಾರ್ಯಕರ್ತನನ್ನು ತರಾಟೆಗೆ ತೆಗೆದುಕೊಂಡರು. ಸ್ಥಳದಲ್ಲಿದ್ದ ಪೊಲೀಸರು ಮತ್ತು ಇತರ ಕಾರ್ಯಕರ್ತರು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಪ್ರತಾಪಸಿಂಹ ಪರ ಹಾಗೂ ವಿರೋಧ ಘೋಷಣೆ ಕೂಗಿದ್ದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !