ದಾವಣಗೆರೆಯ ಪ್ರಥಮ್‌ ‘ಯುವ ವಿಜ್ಞಾನಿ’

7

ದಾವಣಗೆರೆಯ ಪ್ರಥಮ್‌ ‘ಯುವ ವಿಜ್ಞಾನಿ’

Published:
Updated:
Deccan Herald

ಕಲಬುರ್ಗಿ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಇಲ್ಲಿ ಹಮ್ಮಿಕೊಂಡಿದ್ದ 26ನೇ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ದಾವಣಗೆರೆಯ ನಿಟ್ಟುವಳ್ಳಿ ಆರ್‌ವಿಕೆ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿ ಪ್ರಥಮ್‌ ಕೆ.ಎಂ. ಅವರು 2018ನೇ ಸಾಲಿನ ‘ಯುವ ವಿಜ್ಞಾನಿ’ ಆಗಿ ಹೊರಹೊಮ್ಮಿದರು.

‘ದ್ರವತ್ಯಾಜ್ಯದಲ್ಲಿರುವ ಭಾರಲೋಹಗಳನ್ನು ಹೀರಿಕೊಳ್ಳುವ ಶಿಲೀಂದ್ರಗಳು’ ಕುರಿತು ಅವರು ಮಂಡಿಸಿದ ಸಂಶೋಧನಾ ವರದಿ, ಹಿರಿಯ ವಿಜ್ಞಾನಿಗಳ ಪ್ರಶಂಸೆಗೂ ಪಾತ್ರವಾಯಿತು. ಚರಂಡಿಯಲ್ಲಿ ಹರಿಯುವ ವ್ಯರ್ಥ ನೀರನ್ನು ಮರು ಬಳಕೆ ಮಾಡಿಕೊಳ್ಳಲು ಈ ಪ್ರಯೋಗದಿಂದ ಸಾಧ್ಯವಿದೆ ಎಂದು ತೀರ್ಪುಗಾರರು ಅಭಿಪ್ರಾಯಪಟ್ಟರು. ಶಿಕ್ಷಕ ಲೋಹಿತ್‌ ಮಾರ್ಗದರ್ಶನ ಮಾಡಿದ್ದಾರೆ.

ಎಲೆಕ್ಟ್ರಿಕಲ್‌ ಎಂಜಿನಿಯರ್‌ ಶಿವಯೋಗಿ ಹಾಗೂ ಸಿವಿಲ್‌ ಎಂಜಿನಿಯರ್‌ ಪೂರ್ಣಿಮಾ ಅವರ ಪುತ್ರ ಪ್ರಥಮ್‌, ವಿಜ್ಞಾನಿ ಆಗುವ ಕನಸು ಕಟ್ಟಿಕೊಂಡಿದ್ದಾರೆ. ತಮ್ಮ ಸಂಶೋಧನೆಯನ್ನು ಕೇಂದ್ರ ಸರ್ಕಾರಕ್ಕೆ ನೀಡಿ ದೇಶದಾದ್ಯಂತ ಉಪಯೋಗ ಆಗುವ ಹಾಗೆ ಮಾಡಬೇಕು ಎಂಬುದು ಅವರ ಇಚ್ಚೆ.

ಸಮಾರೋಪ ಸಮಾರಂಭದಲ್ಲಿ ‘ಇಸ್ರೊ’ ನಿಗಟಪೂರ್ವ ಅಧ್ಯಕ್ಷ ಎ.ಎಸ್‌.ಕಿರಣಕುಮಾರ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !