ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಡಿ: ಮೋದಿ ಸಮಾವೇಶ 18ರಂದು; ಲಕ್ಷಕ್ಕೂ ಹೆಚ್ಚು ಜನ ನಿರೀಕ್ಷೆ, ಬಿಗಿ ಭದ್ರತೆ

Last Updated 17 ಏಪ್ರಿಲ್ 2019, 14:17 IST
ಅಕ್ಷರ ಗಾತ್ರ

ಚಿಕ್ಕೋಡಿ: ಚಿಕ್ಕೋಡಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಾದ ಅಣ್ಣಾಸಾಹೇಬ ಜೊಲ್ಲೆ ಮತ್ತು ಸುರೇಶ ಅಂಗಡಿ ಪರ ಪ್ರಚಾರಕ್ಕಾಗಿ ಏ. 18ರಂದು ಇಲ್ಲಿನಬಿ.ಕೆ. ಕಾಲೇಜು ಎದುರಿನಲ್ಲಿ ಆಯೋಜಿಸಿರುವ ಬೃಹತ್‌ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ.

ಬೃಹತ್‌ ವೇದಿಕೆ ನಿರ್ಮಿಸಲಾಗಿದ್ದು, ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ಸಾಧ್ಯತೆ ಎಂದು ಆಯೋಜಕರು ತಿಳಿಸಿದ್ದಾರೆ. ಪಟ್ಟಣದಾದ್ಯಂತ ಬಿಗಿ ಭದ್ರತೆಯನ್ನೂ ಕೈಗೊಳ್ಳಲಾಗಿದೆ. ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ ಹಾಗೂ ಎಸ್ಪಿ ಸುಧೀರ್‌ಕುಮಾರ್‌ ರೆಡ್ಡಿ ಸಮಾವೇಶ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಅಧಿಕಾರಿಗಳು ಸೇರಿದಂತೆ 1,357 ಪೊಲೀಸರನ್ನು ನಿಯೋಜಿಸಲಾಗಿದೆ. ನಾಲ್ವರು ಎಸ್ಪಿಗಳು, ಐವರು ಡಿವೈಎಸ್ಪಿಗಳು, 26 ಸಿಪಿಐಗಳು, 70 ಪಿಎಸ್‌ಐಗಳು, 96 ಎಎಸ್‌ಐಗಳು, 716 ಹವಾಲ್ದಾರರು ಮತ್ತು ಕಾನ್‌ಸ್ಟೆಬಲ್‌ಗಳು, 9 ಕೆಎಸ್‌ಆರ್‌ಪಿ ತುಕಡಿಗಳು, 4 ಡಿಎಆರ್ ತುಕಡಿಗಳು ಭದ್ರತೆ ನೋಡಿಕೊಳ್ಳಲಿವೆ.

ವಾಹನ ಸಂಚಾರ ಮಾರ್ಗ ಬದಲಾವಣೆ

ಸಮಾವೇಶದ ಪ್ರಯುಕ್ತ ಉಂಟಾಗಲಿರುವ ಜನದಟ್ಟಣೆ ಮತ್ತು ವಾಹನ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ವಾಹನ ಸಂಚಾರಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

* ಅಥಣಿ ಕಡೆಯಿಂದ ಬರುವ ವಾಹನಗಳು ಕೇರೂರ ಕ್ರಾಸ್‌, ಜೋಡಕುರಳಿ, ಉಮರಾಣಿ ಮಾರ್ಗವಾಗಿ ಬಂಬಲವಾಡ, ಕರೋಶಿ ಮೂಲಕ ಹೋಗಬೇಕು.

* ಬೆಳಗಾವಿ ಕಡೆಯಿಂದ ಬರುವ ವಾಹನಗಳು ಚನ್ಯಾನದಡ್ಡಿ, ಘಟ್ಟಗಿ ಬಸವಣ್ಣ ಕ್ರಾಸ್, ಬಂಬಲವಾಡ ಕ್ರಾಸ್, ಉಮರಾಣಿ, ಜೋಡಕುರಳಿ, ಕೇರೂರ ಕ್ರಾಸ್‌ ಮೂಲಕ ಸಂಚರಿಸಬೇಕು.

* ನಿಪ್ಪಾಣಿ ಕಡೆಯಿಂದ ಬರುವ ವಾಹನಗಳು ಆರ್‌ಟಿಒ ಕ್ರಾಸ್‌, ಚನ್ಯಾನದಡ್ಡಿ, ಘಟ್ಟಗಿ ಬಸವಣ್ಣ ಕ್ರಾಸ್, ಬಂಬಲವಾಡ ಕ್ರಾಸ್‌, ಉಮರಾಣಿ ಮಾರ್ಗದಲ್ಲಿ ಹೋಗಬೇಕು.

* ಕಬ್ಬೂರ ಕಡೆಯಿಂದ ಬರುವ ವಾಹನಗಳು ಬೆಳಕೂಡ ಗೇಟ್‌, ಬಂಬಲವಾಡ, ಕರೋಶಿ, ಚನ್ಯಾನದಡ್ಡಿ ಮೂಲಕ ಸಂಚರಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

* ಸದಲಗಾ ಕಡೆಯಿಂದ ಬರುವ ವಾಹನಗಳು ನೇಜ್, ಶಿರಗಾಂವ, ಚಿಂಚಣಿ ಮಾರ್ಗದಲ್ಲಿ ಸಾಗಬೇಕು.

* ಸದಲಗಾ ಕಡೆಗೆ ಹೋಗುವ ವಾಹನಗಳು ಆರ್‌ಟಿಒ ಕ್ರಾಸ್‌, ಚಿಂಚಣಿ, ಶಿರಗಾಂವ, ನೇಜ್ ಕ್ರಾಸ್‌ ಮಾರ್ಗವಾಗಿ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ.

ಪಾರ್ಕಿಂಗ್ ವ್ಯವಸ್ಥೆ

* ನಿಪ್ಪಾಣಿ ಕಡೆಯಿಂದ ಬರುವ ವಾಹನಗಳಿಗೆ ಅಲ್ಲಮಪ್ರಭು ಐಟಿಐ ಕಾಲೇಜು ಮೈದಾನ.

* ಅಥಣಿ, ಕಾಗವಾಡದಿಂದ ಬರುವ ವಾಹನಗಳಿಗೆ ಬಿ.ಕೆ. ಕಾಲೇಜು ಬಳಿಯ ಖಾಲಿ ಜಾಗ.

* ಬೆಳಗಾವಿ, ಸಂಕೇಶ್ವರ, ಹುಕ್ಕೇರಿ ಕಡೆಯಿಂದ ಬರುವ ವಾಹನಗಳಿಗೆ ಚನ್ನವರ ತೋಟದ ಬಳಿ.

* ಮುಧೋಳ, ಮಹಾಲಿಂಗಪುರ ಮತ್ತು ಕಬ್ಬೂರ ಕಡೆಯಿಂದ ಬರುವ ವಾಹನಗಳಿಗೆ ಉಮರಾಣಿ ಘಾಟ್‌ ಬಳಿಯ ಟೆನ್ನಿಸ್‌ ಕೋರ್ಟ್‌ ಬಳಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT