ಮಂಗಳವಾರ, ನವೆಂಬರ್ 12, 2019
19 °C

ಬಳ್ಳಾರಿ ವಿಭಜನೆಯಾದರೆ ವಿಜಯನಗರ 31 ನೇ ಜಿಲ್ಲೆ?

Published:
Updated:

ಬಳ್ಳಾರಿ: ರಾಜ್ಯದ 31 ನೇ ಜಿಲ್ಲೆಯಾಗಿ ವಿಜಯನಗರ ಹೊರಹೊಮ್ಮಲಿದೆಯೇ?

ಬಳ್ಳಾರಿ ಜಿಲ್ಲೆ ವಿಭಜಿಸಿ ವಿಜಯನಗರ ಜಿಲ್ಲೆಯನ್ನು ರಚಿಸಬೇಕೆಂದು ಈ ಭಾಗದ ಸ್ವಾಮೀಜಿ ಮತ್ತು ರಾಜಕಾರಣಿಗಳು ಬುಧವಾರ ಮಾಡಿದ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಈ ಸಂಬಂಧ ಮುಂದಿನ ಸಚಿವ ಸಂಪುಟ ಸಭೆಗೆ ‍ಪ್ರಸ್ತಾವ ಮಂಡಿಸುವಂತೆ ಮುಖ್ಯ ಕಾರ್ಯದರ್ಶಿಗೆ  ಸೂಚಿಸಿದ್ದಾರೆ.

‘11 ತಾಲ್ಲೂಕುಗಳ ಪೈಕಿ, ಬಳ್ಳಾರಿ, ಕುರುಗೋಡು, ಸಿರುಗುಪ್ಪ, ಸಂಡೂರು ಮತ್ತು ಕೂಡ್ಲಿಗಿಯನ್ನು ಮೂಲ ಬಳ್ಳಾರಿಯಲ್ಲಿ ಉಳಿಸುವುದು. ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹಡಗಲಿ ಮತ್ತು ಹರಪನಹಳ್ಳಿಯನ್ನು ಸೇರಿಸಿ, ಹೊಸಪೇಟೆ ಜಿಲ್ಲಾ ಕೇಂದ್ರವಾಗಿರಿಸಿಕೊಂಡು ವಿಜಯನಗರ ಜಿಲ್ಲೆಯನ್ನು ರಚಿಸುವುದು ತುಂಬ ಅಗತ್ಯವಿದೆ’ ಎಂದು ಅವರು ತಮ್ಮ ಟಿಪ್ಪಣಿಯಲ್ಲಿ ಪ್ರತಿಪಾದಿಸಿದ್ದಾರೆ. 

ವಿಜಯನಗರ ಜಿಲ್ಲೆ ಸ್ಥಾಪಿಸಬೇಕೆಂಬ ಆಗ್ರಹ ವಿರೋಧಿಸಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಹಡಗಲಿ ಮತ್ತು ಕೊಟ್ಟೂರನ್ನು ಕೇಂದ್ರವಾಗಿರಿಸಿ ಜಿಲ್ಲೆ ಘೋಷಣೆ ಮಾಡಬೇಕು ಎಂಬ ಬೇಡಿಕೆಗಳೂ ಎದ್ದಿವೆ. 

ಪ್ರತಿಕ್ರಿಯಿಸಿ (+)