ಸನ್ನಡತೆ: 93 ಕೈದಿಗಳ ಬಿಡುಗಡೆಗೆ ಶಿಫಾರಸು

7

ಸನ್ನಡತೆ: 93 ಕೈದಿಗಳ ಬಿಡುಗಡೆಗೆ ಶಿಫಾರಸು

Published:
Updated:

ಬೆಂಗಳೂರು: ರಾಜ್ಯದ ಕೇಂದ್ರ ಕಾರಾಗೃಹಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವವರ ಪೈಕಿ 93 ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡುವ ಪ್ರಸ್ತಾವಕ್ಕೆ ಸಂಪುಟ ಸಭೆ ಗುರುವಾರ ಒಪ್ಪಿಗೆ ನೀಡಿದೆ.

‘ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೈದಿಗಳ ಬಿಡುಗಡೆಗೆ ತೀರ್ಮಾನಿಸಲಾಗಿದ್ದು, ಈ ಬಗ್ಗೆ ರಾಜ್ಯಪಾಲರಿಗೆ ಶಿಫಾರಸು ಮಾಡಲಾಗುವುದು’ ಎಂದು ಸಭೆಯ ಬಳಿಕ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ತಿಳಿಸಿದರು.

ಸಂಪುಟದ ಇತರ ತೀರ್ಮಾನಗಳು:

* ಕೆಎಎಸ್ ವೃಂದದಲ್ಲಿನ ಹುದ್ದೆ ಪದೋನ್ನತಿಗಾಗಿ ಕರ್ತವ್ಯ ಅವಧಿಯ ಮಿತಿ ಕಡಿತಗೊಳಿಸಲಾಗಿದೆ. ಸೂಪರ್ ಟೈಂ ಸ್ಕೇಲ್‌ಗೆ 14 ವರ್ಷದಿಂದ13 ವರ್ಷಕ್ಕೆ, ಸೀನಿಯರ್ ಸೂಪರ್ ಟೈಂ ಸ್ಕೇಲ್ ಪದೋನ್ನತಿಗೆ 16 ವರ್ಷದಿಂದ 15 ವರ್ಷಕ್ಕೆ ಇಳಿಸಲಾಗಿದೆ

* ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿರುವ ಅಪರಾಧ ಪ್ರಕರಣಗಳನ್ನು ಹಿಂಪಡೆಯುವ ಕುರಿತು ಸಂಪುಟ ಉಪ ಸಮಿತಿ ರಚನೆಗೆ ಒಪ್ಪಿಗೆ

* ವಸತಿ ಶಿಕ್ಷಣ ಸಂಸ್ಥೆಗಳ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್, ಟೈ, ಬೆಲ್ಟ್‌ಗಳನ್ನು ₹ 10.36 ಕೋಟಿಯಲ್ಲಿ ಖರೀದಿಸಲು ಅನುಮೋದನೆ

* ಹೊಳೆನರಸೀಪುರ- ಮಾವಿನಕೆರೆ ರೈಲ್ವೆ ರಸ್ತೆ ಮೇಲ್ಸೇತುವೆ ಕೂಡುರಸ್ತೆ ಕಾಮಗಾರಿಯನ್ನು ₹ 39.93 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಒಪ್ಪಿಗೆ. ಕೇಂದ್ರ ಸರ್ಕಾರ ಅರ್ಧ ಹಣ ನೀಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !