150ನೇ ಗಾಂಧಿ ಜಯಂತಿ: ಅಲ್ಪಾವಧಿ ಶಿಕ್ಷಾ ಕೈದಿಗಳಿಗೂ ಬಿಡುಗಡೆ ಭಾಗ್ಯ

7
ಕೇಂದ್ರದ ಸೂಚನೆಯಂತೆ ಮೊದಲ ಬಾರಿಗೆ ಬಿಡುಗಡೆ

150ನೇ ಗಾಂಧಿ ಜಯಂತಿ: ಅಲ್ಪಾವಧಿ ಶಿಕ್ಷಾ ಕೈದಿಗಳಿಗೂ ಬಿಡುಗಡೆ ಭಾಗ್ಯ

Published:
Updated:

ಬೆಂಗಳೂರು: ಇದುವರೆಗೂ ಜೀವಾವಧಿ ಶಿಕ್ಷೆಗೆ ಗುರಿಯಾದ ಕೈದಿಗಳನ್ನು ಮಾತ್ರ ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡುವ ಪದ್ಧತಿ ಜಾರಿಯಲ್ಲಿತ್ತು. ಆದರೆ, ಇದೇ ಮೊದಲ ಬಾರಿಗೆ ಅಲ್ಪಾವಧಿ ಶಿಕ್ಷೆಗೆ (2–10 ವರ್ಷ) ಗುರಿಯಾದ ಕೈದಿಗಳಿಗೂ ಬಿಡುಗಡೆ ಭಾಗ್ಯ ಸಿಕ್ಕಿದೆ.

ಮಹಾತ್ಮ ಗಾಂಧೀಜಿಯ 150ನೇ ಜಯಂತಿ ಪ್ರಯುಕ್ತ ಕೇಂದ್ರ ಸರ್ಕಾರದ ಸೂಚನೆಯಂತೆ ಅಲ್ಪಾವಧಿ ಜೈಲು ಶಿಕ್ಷೆಗೆ ಗುರಿಯಾಗಿ ರಾಜ್ಯದ ಕೇಂದ್ರ ಕಾರಾಗೃಹಗಳಲ್ಲಿದ್ದ 48 ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಶುಕ್ರವಾರ ಬಿಡುಗಡೆ ಮಾಡಲಾಯಿತು.

ನಗರದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಜರುಗಿದ್ದ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್ ಅವರು, ಒಬ್ಬ ಮಹಿಳೆ ಸೇರಿದಂತೆ 15 ಕೈದಿಗಳಿಗೆ ಬಿಡುಗಡೆ ಪ್ರಮಾಣ ಪತ್ರ ನೀಡಿ ಬೀಳ್ಕೊಟ್ಟರು. ಗಾಂಧಿ ಜಯಂತಿ ಪ್ರಯುಕ್ತ ಕಾರಾಗೃಹದಲ್ಲಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಇಬ್ಬರು ಮಹಿಳಾ ಕೈದಿಗಳು ಸೇರಿ 10 ಮಂದಿಗೆ ಪ್ರಶಸ್ತಿ ವಿತರಿಸಲಾಯಿತು. 

ರಾಜ್ಯದ ಆಯಾ ಕೇಂದ್ರ ಕಾರಾಗೃಹಗಳಲ್ಲೂ ಕಾರ್ಯಕ್ರಮ ಆಯೋಜಿಸಿ ಕೈದಿಗಳನ್ನು ಬಿಡುಗಡೆಗೊಳಿಸಲಾಯಿತು. ವರದಕ್ಷಿಣೆ ಕಿರುಕುಳ, ಅಕ್ರಮ ವಾಸ, ವಂಚನೆ ಸೇರಿದಂತೆ ಹಲವು ಪ್ರಕಾರಗಳ ಅಪರಾಧಗಳನ್ನು ಎಸಗಿದ್ದ ಅಪರಾಧಿಗಳು ಇವರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !