ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯನ್ನು ಕಾಡಿದ ‘ಹಿರಿತನ’ದ ಬಿಸಿ

ಸಚಿವ ಸಂಪುಟ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಹಿರಿಯ ಮುಖಂಡರ ಅಸಮಾಧಾನ
Last Updated 20 ಆಗಸ್ಟ್ 2019, 20:08 IST
ಅಕ್ಷರ ಗಾತ್ರ

ಬೆಂಗಳೂರು: 17 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಪಕ್ಷದ ಮುಖಂಡರ ನಡುವೆ ‘ಹಿರಿತನ’ದ ಹೊಸ ಲೆಕ್ಕಾಚಾರವೂ ಚಾಲನೆ ಪಡೆದುಕೊಂಡಿದೆ.

ರಾಜಭವನದಲ್ಲಿಮಂಗಳವಾರ ಪ್ರಮಾಣ ವಚನ ಸ್ವೀಕರಿಸಲು ವೇದಿಕೆಗೆ ಆಹ್ವಾನ ನೀಡುವಾಗ ‘ಹಿರಿಯ’ರನ್ನು ಕಡೆಗಣಿಸಲಾಗಿದೆ ಎಂಬುದು ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.ಉದ್ದೇಶಪೂರ್ವಕವಾಗಿ ಶಿಷ್ಟಾಚಾರ ಪಾಲನೆ ಮಾಡಿಲ್ಲವೊ ಅಥವಾ ರಾಜಭವನಕ್ಕೆ ಕಳುಹಿಸಲು ಪಟ್ಟಿ ಸಿದ್ಧಪಡಿಸುವಾಗ ತರಾತುರಿಯಲ್ಲಿ ಪ್ರಮಾದವಾಗಿದೆಯೊ ಎಂಬ ವಿಚಾರ ಬಿಜೆಪಿ ಪ್ರಮುಖರ ನಡುವೆ ಚರ್ಚೆಯಾಗುತ್ತಿದೆ.

ಸಾಮಾನ್ಯವಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗಿದ್ದವರು, ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾದವರಿಗೆ ಪ್ರಮಾಣ ವಚನ ಸ್ವೀಕರಿಸಲು ಮೊದಲಿಗೆ ಅವಕಾಶ ನೀಡಲಾಗುತ್ತದೆ. ನಂತರ ಒಂದೆರಡು ಬಾರಿಗೆ ಶಾಸಕರಾದವರು, ವಯಸ್ಸಿನಲ್ಲಿ ಕಿರಿಯರನ್ನು ಆಹ್ವಾನಿಸಲಾಗುತ್ತದೆ.

ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್, ಉಪಮುಖ್ಯಮಂತ್ರಿಗಳಾಗಿದ್ದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ ಪಕ್ಷದ ಹಿರಿಯರ ಪಡಸಾಲೆ ಹಾಗೂ ನೀತಿ ನಿರೂಪಕರ ಸ್ಥಾನದಲ್ಲಿ ಇದ್ದವರು. ಆದರೆಪ್ರಮಾಣ ವಚನ ಸ್ವೀಕಾರ ಸಮಯದಲ್ಲಿ ಮೊದಲಿಗೆ ಗೋವಿಂದ ಕಾರಜೋಳ, ನಂತರ ಡಾ.ಸಿ.ಎನ್.ಅಶ್ವಥನಾರಾಯಣ, ಲಕ್ಷ್ಮಣ ಸವದಿ ಹೆಸರು ಕರೆಯಲಾಯಿತು. ಕೆ.ಎಸ್.ಈಶ್ವರಪ್ಪ, ಆರ್.ಅಶೋಕ, ಜಗದೀಶ್ ಶೆಟ್ಟರ್ ನಂತರ ಪ್ರಮಾಣ ಸ್ವೀಕರಿಸಿದರು.

‘ಯಾರಿಗೆ ಮುಂಚೂಣಿ ಸ್ಥಾನ ನೀಡಬೇಕು, ಯಾರನ್ನು ಹೆಚ್ಚು ಗುರುತಿಸಬೇಕು ಎಂಬ ಲೆಕ್ಕಾಚಾರವನ್ನು ನಡೆಸಿಯೇ ರಾಜ್ಯಪಾಲರಿಗೆ ಮುಖ್ಯಮಂತ್ರಿ ಪಟ್ಟಿಕಳುಹಿಸಿಕೊಟ್ಟಿರುತ್ತಾರೆ. ಈ ಪಟ್ಟಿಯಂತೆ ನಾನು ಮುಂಚೂಣಿ ನಾಯಕನಾಗಿದ್ದು,ಅದೇ ಹಿರಿತನ ಮುಂದುವರಿಯಲಿದೆ’ ಎಂದು ನೂತನ ಸಚಿವರೊಬ್ಬರು ತಿಳಿಸಿದರು.

‘ಸಚಿವರಿಗೆ ಖಾತೆ ಹಂಚಿಕೆ ಮಾಡಿದ ನಂತರ ರಾಜ್ಯಪಾಲರು ಅಧಿಸೂಚನೆ ಹೊರಡಿಸಲಿದ್ದು, ಆ ಪಟ್ಟಿಯಂತೆ ಸಚಿವ ಸಂಪುಟದಲ್ಲಿ ಹಿರಿತನ ಪರಿಗಣನೆಯಾಗುತ್ತದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT