ನಿರ್ಮಾಪಕ ನಾಗರಾಜ ಶ್ರೇಷ್ಠಿ ಇನ್ನಿಲ್ಲ

7

ನಿರ್ಮಾಪಕ ನಾಗರಾಜ ಶ್ರೇಷ್ಠಿ ಇನ್ನಿಲ್ಲ

Published:
Updated:
Deccan Herald

ಚಿಕ್ಕಮಗಳೂರು/ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಎಸ್‌.ನಾಗರಾಜ ಶ್ರೇಷ್ಠಿ (97) ನಗರದ ನಾಯ್ಡು ಬೀದಿಯ ಸ್ವಗೃಹದಲ್ಲಿ ಭಾನುವಾರ ನಿಧನರಾದರು.

ಶ್ರೇಷ್ಠಿ ಅವರು ಸಿನಿಮಾ ನಿರ್ಮಾಪಕ, ವಿತರಕ, ಪ್ರದರ್ಶಕರಾಗಿದ್ದರು. ನಗರದ ಕನ್ನಿಕಾ ಪರಮೇಶ್ವರಿ ದೇಗುಲ ಮಂಡಳಿ ಅಧ್ಯಕ್ಷರಾಗಿ, ಗಣಪತಿ ಸೇವಾ ಸಮಿತಿ ಅಧ್ಯಕ್ಷರಾಗಿ, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.

‘ನಾಗರಹೊಳೆ’, ‘ಪರಾಜಿತ’, ‘ಮೂರು ಜನ್ಮ’, ‘ಶ್ರಾವಣ ಸಂಜೆ’, ‘ಕೂಡಿ ಬಾಳಿದರೆ ಸ್ವರ್ಗ ಸುಖ’ ಸಿನಿಮಾಗಳನ್ನುನಿರ್ಮಾಣ ಮಾಡಿದ್ದರು.ವರನಟ ಡಾ.ರಾಜ್‌ಕುಮಾರ್‌ ಕುಟುಂಬದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.

ಶ್ರೇಷ್ಠಿ ಅವರಿಗೆ ಪುತ್ರರಾದ ಪಾರ್ಥನಾಥ್‌, ರಾಮನಾಥ್‌, ರಘುನಾಥ್‌, ವಿಶ್ವನಾಥ್‌, ಬದ್ರಿನಾಥ್‌, ಶ್ರೀನಾಥ್‌ ಹಾಗೂ ಪುತ್ರಿ ಗೀತಾಲಕ್ಷ್ಮಿ ಇದ್ದಾರೆ. ನಗರದ ಮಲ್ಲಂದೂರು ರಸ್ತೆಯ ಖಾಸಗಿ ಬಸ್‌ ನಿಲ್ದಾಣದ ಎದುರಿನ ಮುಕ್ತಿಧಾಮ ಚಿತಾಗಾರದಲ್ಲಿ ಸೋಮವಾರ ಬೆಳಿಗ್ಗೆ 10 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

‘ಬಹಳ ದೊಡ್ಡ ಮನುಷ್ಯ ಅವರು. ನಾಗರಹೊಳೆ ಸಿನಿಮಾಕ್ಕೆ ಹಣ ಹೂಡಿಕೆ ಮಾಡಿದ್ದರು’ ಎಂದು ನಿರ್ದೇಶಕ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ನೆನಪಿಸಿಕೊಂಡಿದ್ದಾರೆ.

‘ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಏರಿದ ಪರ ಊರಿನವರ ಪೈಕಿ (ಅಂದರೆ ಬೆಂಗಳೂರಿಗ ಅಲ್ಲದವರು) ಶ್ರೇಷ್ಠಿ ಮೊದಲಿಗರು’ ಎಂದು ಮಂಡಳಿ ಈಗಿನ ಅಧ್ಯಕ್ಷ ಚಿನ್ನೇಗೌಡ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !