‘ಪ್ರಾಜೆಕ್ಟ್ ಶಕ್ತಿ’ಗೆ 30 ಸಾವಿರ ಸ್ಪಂದನೆ!

7
ಕಾಂಗ್ರೆಸ್‌ ವಲಯದಲ್ಲಿ ಹೊಸ ಹುರುಪು ತಂದ ಯೋಜನೆ

‘ಪ್ರಾಜೆಕ್ಟ್ ಶಕ್ತಿ’ಗೆ 30 ಸಾವಿರ ಸ್ಪಂದನೆ!

Published:
Updated:

ಬೆಂಗಳೂರು: ಸದಸ್ಯತ್ವ ನೋಂದಣಿ ಮತ್ತು ಮಾಹಿತಿ ಹಂಚಿಕೊಳ್ಳಲು ಪಕ್ಷ ಆರಂಭಿಸಿದ ‘ಪ್ರಾಜೆಕ್ಟ್ ಶಕ್ತಿ’ ಯೋಜನೆಗೆ 30 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸ್ಪಂದಿಸಿರುವುದು ಕಾಂಗ್ರೆಸ್‌ ವಲಯದಲ್ಲಿ ಹೊಸ ಹುರುಪು ಮೂಡಿಸಿದೆ.

ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟು ಕಾಂಗ್ರೆಸ್‌ ಚಾಲನೆ ನೀಡಿರುವ ಈ ಯೋಜನೆಯ ಮೂಲಕ ಸದಸ್ಯತ್ವಕ್ಕೆ ‘ಶಕ್ತಿ’ ತುಂಬುವ ಜೊತೆಗೆ ಸಂಘಟನೆಯ ಬಲವರ್ಧನೆಗೂ ಅನುಕೂಲವಾಗಲಿದೆ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಹೇಳಿದರು.

ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿದ್ದರು. ಇದೀಗ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು (ವೋಟರ್ ಐಡಿ) 7045006100 ಸಂಖ್ಯೆಗೆ ಎಸ್ಎಂಎಸ್‌ ಕಳುಹಿಸಿ ನೋಂದಣಿ ಮಾಡಿದರೆ, ಕಾಲ್ ಸೆಂಟರ್‌ನಿಂದ ಕರೆ ಮತ್ತು ರಾಹುಲ್ ಗಾಂಧಿ ಧ್ವನಿಮುದ್ರಿಕೆಯಲ್ಲಿ ಧನ್ಯವಾದ ತಿಳಿಸಲಾಗುತ್ತದೆ. ಹೀಗೆ ನೋಂದಣಿಯಾದವರ ಜೊತೆ ನಿರಂತರ ಸಂಪರ್ಕ ಬೆಳೆಸುವುದು ಯೋಜನೆಯ ಉದ್ದೇಶ.

ಹೊಸ ಯೋಜನೆಯಡಿ ತಕ್ಷಣವೇ ನೋಂದಣಿ ಮಾಡಿಸುವಂತೆ ಜಿಲ್ಲಾ ಮತ್ತು ಬ್ಲಾಕ್ ಸಮಿತಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ನೋಂದಣಿ ಕಾರ್ಯದ ಪ್ರಗತಿಯನ್ನು ಬೆಂಗಳೂರಿನಲ್ಲಿರುವ ಪಕ್ಷದ ಕಚೇರಿಯಲ್ಲಿ ವೀಕ್ಷಿಸುವ ಅವಕಾಶವಿದೆ. ಯಾವ ಬ್ಲಾಕ್, ಯಾವ ಜಿಲ್ಲಾ ಘಟಕ ನೋಂದಣಿ ಕ್ರಿಯೆಯಲ್ಲಿ ಸಕ್ರಿಯವಾಗಿದೆ ಎಂದು ಪರಿಶೀಲಿಸಬಹುದು. ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ರೂಪಿಸಿರುವ ಈ ಯೋಜನೆ ಅನುಷ್ಠಾನಕ್ಕೆ ನಿರಾಸಕ್ತಿ ತೋರುವವರು ಬಗ್ಗೆಯೂ ತಿಳಿಯಬಹುದು.

‘ಪ್ರಾಜೆಕ್ಟ್ ಶಕ್ತಿ’ ಯೋಜನೆಯನ್ನು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ನೋಂದಣಿಗೊಂಡವರಿಗೆ ಪಕ್ಷದ ಸಂದೇಶಗಳನ್ನು ನೇರವಾಗಿ ಕಳುಹಿಸುವ ಜೊತೆಗೆ ಅವರ ಅಭಿಪ್ರಾಯಗಳನ್ನು ಪಡೆದು ಪ್ರತಿಕ್ರಿಯಿಸುವ ರೀತಿಯಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ. ನಿರೀಕ್ಷೆಯಂತೆ ನೋಂದಣಿ ನಡೆದರೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದಿಂದ ಯಾರು ಅಭ್ಯರ್ಥಿಯಾದರೆ ಸೂಕ್ತ ಎಂದು ಅಭಿಪ್ರಾಯ ಸಂಗ್ರಹಿಸಲು ಅನುಕೂಲ ಆಗಬಹುದು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !