ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ ವಿವಾದ : ಕೇಂದ್ರ ಸರ್ಕಾರಕ್ಕೆ ಸಾಧ್ಯವಿಲ್ಲದ್ದು ಏನಿದೆ?

ಪಾಟೀಲ ಪುಟ್ಟಪ್ಪ ಪ್ರಶ್ನೆ
Last Updated 27 ಫೆಬ್ರುವರಿ 2018, 9:40 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮಹದಾಯಿ ವಿಚಾರವನ್ನು ‌ಬಗೆಹರಿಸುವುದು ಕೇಂದ್ರ ಸರ್ಕಾರಕ್ಕೆ ಕಷ್ಟದ ಕೆಲಸವೇನಲ್ಲ. ಯಾವ್ಯಾವುದೋ‌ ವಿವಾದ ಬಗೆಹರಿಸುವ ಪ್ರಧಾನಮಂತ್ರಿಗೆ ಮಹದಾಯಿ ದೊಡ್ಡ ‌ವಿಚಾರವೇ ಅಲ್ಲ’ ಎಂದು ಹಿರಿಯ ಪತ್ರಕರ್ತ ಡಾ.ಪಾಟೀಲ ‌ಪುಟ್ಟಪ್ಪ ಅಭಿಪ್ರಾಯಪಟ್ಟರು.

ಸುದ್ದಿಗಾರರೊಂದಿಗೆ ನಗರದಲ್ಲಿ ‌ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ‌ಮೋದಿ ಅವರು‌ ಮನಸ್ಸು ‌ಮಾಡಿದರೆ‌ ಶೀಘ್ರವೇ ಸಭೆ ಕರೆದು ರಾಜ್ಯಕ್ಕೆ ನೀರು ಕೊಡಿಸಬಹುದು’ ಎಂದರು.

‘ಕರ್ನಾಟಕದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ವಿವಾದ ಪರಿಹರಿಸುತ್ತೇವೆ ಎಂದು‌ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ. ಅಧಿಕಾರ ‌ಸಿಗದಿದ್ದರೆ ವಿವಾದ ಇತ್ಯರ್ಥಗೊಳಿಸುವ ಉದ್ದೇಶ ‌ಇಲ್ಲವೇ ಎಂದು’ ಪಾಪು ಖಾರವಾಗಿ ಪ್ರಶ್ನಿಸಿದರು.

‘ಮಹದಾಯಿ ಹೋರಾಟಗಾರರೊಂದಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ‌ಗಾಂಧಿ‌ ಸಭೆ ನಡೆಸದೇ ಹೋದದ್ದು ಸರಿಯಲ್ಲ. ಆದರೆ, ಕಾಂಗ್ರೆಸ್‌ಗಿಂತಲೂ ಹೆಚ್ಚು ಜವಾಬ್ದಾರಿ ‌ಕೇಂದ್ರ ಹಾಗೂ ಗೋವಾ, ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT