ಜಯನಗರ ಪಿಎಸ್‌ಐ ಮೇಲೆ ಕಾರು ಹರಿಸಲು ಯತ್ನ: ನಾಲ್ವರ ಬಂಧನ

7

ಜಯನಗರ ಪಿಎಸ್‌ಐ ಮೇಲೆ ಕಾರು ಹರಿಸಲು ಯತ್ನ: ನಾಲ್ವರ ಬಂಧನ

Published:
Updated:

ತುಮಕೂರು: ಇಲ್ಲಿನ ಜಯನಗರ ಠಾಣೆ ಸಬ್‌ಇನ್‌ಸ್ಪೆಕ್ಟರ್ ನವೀನ್ ಅವರ ಮೇಲೆ ಕಾರು ಹರಿಸಿ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಬೆಂಗಳೂರಿನ ಹೊಸಗುಡ್ಡದಹಳ್ಳಿಯ ದಿಲೀಪ್ ಕುಮಾರ್ (27), ಕಲಾಸಿಪಾಳ್ಯದ ಸಂತೋಷ್ (23), ಕೆ.ಆರ್‌.ಮಾರುಕಟ್ಟೆಯ ವಿತ್ತೇಶ್ (21), ಮುರುಗನ್ (24) ಎಂಬುವವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. 

ಉಪ್ಪಾರಹಳ್ಳಿ ಕೆಳ ಸೇತುವೆ ಬಳಿ ಸೋಮವಾರ ನಡುರಾತ್ರಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇನೋವಾ ಕ್ರಿಸ್ಟಾ ವಾಹನವನ್ನು ನವೀನ್ ತಡೆದು ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ಚಾಲಕ, ನವೀನ್ ಅವರನ್ನು ಕೆಳಗೆ ತಳ್ಳಿ ಅವರ ಮೇಲೆ ವಾಹನ ಹರಿಸಲು ಯತ್ನಿಸಿದ್ದ. ಕಾರಿನಲ್ಲಿದ್ದ ಎಲ್ಲರೂ ಪರಾರಿಯಾಗಿದ್ದರು.

‘ಕೌಟುಂಬಿಕ ವೈಷಮ್ಯದ ಕಾರಣಕ್ಕೆ ವೇಣುಗೋಪಾಲ್‌ ಎಂಬುವವರನ್ನು ಅಪಹರಿಸಲು ತುಮಕೂರಿಗೆ ಬಂದಿದ್ದೆವು’ ಎಂದು ವಿಚಾರಣೆ ವೇಳೆ ಆರೋಪಿಗಳು ತಿಳಿಸಿದ್ದಾರೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಮಾಹಿತಿ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 3

  Sad
 • 0

  Frustrated
 • 0

  Angry

Comments:

0 comments

Write the first review for this !