ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ನಲ್ಲಿ ‘ರಾಷ್ಟ್ರೀಯ ಸಮೋಸ ಸಪ್ತಾಹ’

Last Updated 25 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಲಂಡನ್‌ : ದೇಣಿಗೆ ಸಂಗ್ರಹಿಸುವ ಉದ್ದೇಶದಿಂದ ಇದೇ ಮೊದಲ ಸಲ ಆಯೋಜಿಸಿರುವ ‘ರಾಷ್ಟ್ರೀಯ ಸಮೋಸ ಸಪ್ತಾಹ’ ಆಚರಣೆಗೆ ಇಂಗ್ಲೆಂಡ್‌ನ ಆರು ನಗರಗಳು ಸಜ್ಜಾಗಿವೆ.

ಏಪ್ರಿಲ್ 9ರಿಂದ ಲೀಸೆಸ್ಟರ್‌, ಬರ್ಮಿಂಗ್‌ಹ್ಯಾಂ, ಮ್ಯಾಂಚೆಸ್ಟರ್‌, ಕೋವೆಂಟ್ರಿ, ನಾಟಿಂಗ್‌ಹ್ಯಾಂಷೈರ್‌ ಮತ್ತು ರ‍್ಯಾಡ್ಲೆಟ್‌ ನಗರಗಳಲ್ಲಿ ಈ ಸಪ್ತಾಹ ಆಚರಿಸಲು ಸಿದ್ಧತೆ ನಡೆಸಲಾಗಿದೆ. ಇದರಲ್ಲಿ ಭಾಗವಹಿಸುವವರು ಸಮೋಸ ತಯಾರಿಸಿ, ಮಾರಾಟ ಮಾಡಬಹುದು. ಭೇಟಿ ನೀಡುವವರು ಸಮೋಸ ಸೇವಿಸಿ, ದೇಣಿಗೆ ನೀಡಬಹುದು. ಸಮೋಸ ತಿನ್ನುವ ಸ್ಪರ್ಧೆ, ಸಮೋಸ ಮಾರಾಟ ಮಳಿಗೆಗಳ ನಿರ್ಮಾಣ ಮತ್ತು ‘ಅತ್ಯಂತ ರುಚಿಕರ ಸಮೋಸ’ಕ್ಕೆ ಬಹುಮಾನ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಇರುತ್ತವೆ.

ಕರ್ತವ್ಯ ನಿರ್ವಹಿಸುವಾಗ ಮೃತಪಟ್ಟ ಪೊಲೀಸ್‌ ಅಧಿಕಾರಿಗಳ ಕುಟುಂಬದವರ ಸಹಾಯಾರ್ಥ ನಿಧಿ ಸಂಗ್ರಹಿಸುವ ಉದ್ದೇಶದಿಂದ ಈ ಸಪ್ತಾಹ ಹಮ್ಮಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT