ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಪರೀಕ್ಷೆ: 42 ಪುಟಗಳ ಬುಕ್‌ಲೆಟ್‌

ಹೆಚ್ಚುವರಿ ಹಾಳೆ ಪಡೆಯುವುದಕ್ಕೆ ಅವಕಾಶ ಇಲ್ಲ
Last Updated 27 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಪಿಯು ಉತ್ತರ ಪತ್ರಿಕೆಯಲ್ಲಿ ಕಾಣಿಸುವ ಗೊಂದಲ ನಿವಾರಿಸಲು ಈ ಬಾರಿಯಿಂದ ವಾರ್ಷಿಕ ಪರೀಕ್ಷೆ ವೇಳೆ 42 ಪುಟಗಳ ಬುಕ್‌ಲೆಟ್‌ ನೀಡುವ ವ್ಯವಸ್ಥೆ ಜಾರಿಗೆ ಬರಲಿದೆ.

‘ಹಲವು ವರ್ಷಗಳಿಂದ ವಿದ್ಯಾರ್ಥಿಗಳು ಸರಾಸರಿ ಎಷ್ಟು ಪುಟಗಳಷ್ಟು ಉತ್ತರ ಬರೆದಿದ್ದಾರೆಎಂಬುದನ್ನು ಲೆಕ್ಕ ಹಾಕಿಕೊಂಡು 42 ಪುಟಗಳ ಬುಕ್‌ಲೆಟ್ ಸಿದ್ಧಪಡಿಸುವ ತೀರ್ಮಾನಕ್ಕೆ ಬಂದಿದ್ದೇವೆ. ಇನ್ನು ಮುಂದೆ ಹೆಚ್ಚುವರಿ ಹಾಳೆ ಕೊಡುವ, ಅದನ್ನು ಮೂಲ ಉತ್ತರ ಪತ್ರಿಕೆಯೊಂದಿಗೆ ಜೋಡಿಸುವ ಪ್ರಮೇಯ ಬರುವುದಿಲ್ಲ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಎಂ.ಕನಗವಲ್ಲಿ
ತಿಳಿಸಿದರು.

ಯಾಕಾಗಿ ಈ ಕ್ರಮ?: ಕಳೆದ ವರ್ಷ ಪರೀಕ್ಷೆ ಬರೆದಿದ್ದ 6.90 ಲಕ್ಷ ವಿದ್ಯಾ ರ್ಥಿಗಳ ಪೈಕಿ 1 ಲಕ್ಷದಷ್ಟು ಮಂದಿ ಮರುಮೌಲ್ಯಮಾಪನ, ಮರು ಎಣಿಕೆಗೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಕೆಲವರು ತಮ್ಮ ಉತ್ತರ ಪತ್ರಿಕೆಯಿಂದ ಹೆಚ್ಚುವರಿ ಹಾಳೆಕಳೆದುಹೋಗಿವೆ ಎಂದು ದೂರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT