ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿತೀಯ ಪಿಯು ಪರೀಕ್ಷೆ ವಿಶೇಷಗಳು

Last Updated 27 ಫೆಬ್ರುವರಿ 2019, 20:24 IST
ಅಕ್ಷರ ಗಾತ್ರ

ಪರೀಕ್ಷೆಯಲ್ಲಿ ಅಕ್ರಮ ನಡೆಸದಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ. ಅದರ ಮಾಹಿತಿ–

ಹಾಜರಾಗುವ ಒಟ್ಟು ವಿದ್ಯಾರ್ಥಿಗಳು: 6,73,606

ಬಾಲಕರು 338868

ಬಾಲಕಿಯರು 334738

ಯಾವ ವಿಭಾಗದಲ್ಲಿ ಎಷ್ಟು:

ಕಲಾ ವಿಭಾಗ 201022

ವಾಣಿಜ್ಯ 254516

ವಿಜ್ಞಾನ 218068

ಮಾಧ್ಯಮ:

* ಇಂಗ್ಲಿಷ್‌ 378154
*ಕನ್ನಡ 295452

***

ಅಕ್ರಮ ತಡೆಗೆ ಸ್ಕ್ವಾಡ್‌ಗಳು
* 1013ಪರೀಕ್ಷಾ ಕೇಂದ್ರಗಳು
* 2026 ವಿಶೇಷ ಮೇಲ್ವಿಚಾರಕ ತಂಡಗಳು

ಜಿಲ್ಲಾ ಮಟ್ಟದ ಸ್ಕ್ವಾಡ್‌ಗಳು

ಮುಖ್ಯ ಅಧೀಕ್ಷರು 1013

ಸಹ ಅಧೀಕ್ಷಕರು 1028

***

ಉಚಿತ ಪ್ರಯಾಣ ವ್ಯವಸ್ಥೆ
ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ಹೋಗಲು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ವತಿಯಿಂದ ಉಚಿತ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ. ಹಾಲ್‌ ಟಿಕೆಟ್‌ ತೋರಿಸಿದರೆ ಸಾಕು.

***
ಏನನ್ನು ಒಯ್ಯಬಾರದು:ಪರೀಕ್ಷಾ ಕೇಂದ್ರದ ಒಳಗೆ ಮೊಬೈಲ್‌, ಸ್ಮಾರ್ಟ್‌ ವಾಚ್‌ ಮತ್ತು ಇನ್ನಿತರ ಎಲೆಕ್ಟ್ರಾನಿಕ್‌ ಉಪಕರಣಗಳು. ಎಲೆಕ್ಟ್ರಾನಿಕ್‌ ಅಲ್ಲದ ಮಾಮೂಲಿ ಕೈಗಡಿಯಾರ ಕಟ್ಟಿಕೊಂಡು ಹೋಗಬಹುದು.

***

ಪ್ರಶ್ನೆ ಪತ್ರಿಕೆಗಳನ್ನು ಹಂಚಿದರೆ ಜೈಲು
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಸುತ್ತಮುತ್ತ ಅಥವಾ ಬೇರೆ ಕಡೆಗಳಲ್ಲಿ ಪರೀಕ್ಷೆಗೆ ಮುನ್ನ ಪ್ರಶ್ನೆಗಳನ್ನು ಹಂಚಿಕೊಳ್ಳುವುದು ಕಂಡು ಬಂದರೆ ಬಂಧಿಸಲಾಗುವುದು. ಜೈಲಿಗೆ ಕಳುಹಿಸುವುದಕ್ಕೂ ಅವಕಾಶವಿದೆ. ಸೈಬರ್‌ ಕ್ರೈಂ ಅಡಿ ಕ್ರಮ ತೆಗೆದುಕೊಳ್ಳಲಾಗುವುದು.

***

ಕನ್ನಡ – ಇಂಗ್ಲಿಷ್‌ ಮಿಶ್ರಣ ಸಲ್ಲ
ಉತ್ತರ ಬರೆಯುವಾಗ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಇಂಗ್ಲಿಷ್‌ ಪದಗಳನ್ನೂ, ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳು ಉತ್ತರದಲ್ಲಿ ಕನ್ನಡದ ಪದಗಳನ್ನು ಬಳಸುವಂತಿಲ್ಲ. ಆಯಾಯ ಭಾಷೆಯ ಪದಗಳನ್ನೇ ಬಳಸಬೇಕು.

***
ಇತರ ಪ್ರಮುಖ ಅಂಶಗಳು
*ಪರೀಕ್ಷಾ ಕೇಂದ್ರಗಳ 200 ಮೀಟರ್‌ ಪ್ರದೇಶದಲ್ಲಿ ಅನಧಿಕೃತ ವ್ಯಕ್ತಿಗಳ ಪ್ರವೇಶ ನಿಷೇಧಿಸಲಾಗಿದೆ.

* ಪರೀಕ್ಷಾ ಕೇಂದ್ರಗಳ ಆಸುಪಾಸಿನ ಜೆರಾಕ್ಸ್‌ ಅಂಗಡಿಗಳನ್ನು ಮುಚ್ಚಿಸಲಾಗುತ್ತದೆ.

* ಪ್ರಶ್ನೆ ಪತ್ರಿಗಳನ್ನು ಇರಿಸುವ ಸ್ಟ್ರಾಂಗ್‌ರೂಮ್‌ಗಳಿಗೆ 24x7 ಸಶಸ್ತ್ರ ಪೊಲೀಸ್‌ ಭದ್ರತೆ ಒದಗಿಸಲಾಗಿದೆ.

* ಪ್ರಶ್ನೆ ಪತ್ರಿಕೆಗಳನ್ನು ಸಾಗಿಸುವ ವಾಹನಗಳಿಗೆ ಜಿಪಿಎಸ್‌ ಟ್ರ್ಯಾಕಿಂಗ್‌ ಸಿಸ್ಟಮ್‌ ಅಳವಡಿಸಿ ಪೊಲೀಸ್‌ ಭದ್ರತೆಯಲ್ಲಿ ಸಾಗಿಸಲಾಗುವುದು.

* ಪರೀಕ್ಷಾ ಕೇಂದ್ರದ ಒಳಗೆ ಅನಧಿಕೃತ ವ್ಯಕ್ತಿಗಳ ಪ್ರವೇಶ ನಿಷೇಧಿಸಲಾಗಿದೆ.

* ಪ್ರಶ್ನೆ ಪತ್ರಿಕೆ ಇರಿಸಿದ ಖಜಾನೆಗಳು ಮತ್ತು ಪರೀಕ್ಷೆ ನಡೆಯುವ ಕೊಠಡಿಗಳ ಮೇಲೆ ನಿರತಂತರ ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲಿರುತ್ತದೆ. ಅದನ್ನು ಕೇಂದ್ರ ಕಚೇರಿಯಲ್ಲಿ24x7 ವೀಕ್ಷಿಸಲಾಗುವುದು.

* ಪ್ರಶ್ನೆ ಪತ್ರಿಕೆ ಸೋರಿಕೆ ಮಾಹಿತಿ ಸಿಕ್ಕಿದರೆ ಜಿಲ್ಲಾಡಳಿತ, ಪೊಲೀಸ್‌ ಅಥವಾ ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT