ಸೋಮವಾರ, ನವೆಂಬರ್ 18, 2019
25 °C

ಉಪನ್ಯಾಸಕರ ನೇಮಕಾತಿ ಪಟ್ಟಿ ಪ್ರಕಟ; ಕನ್ನಡ ಪತ್ರಿಕೆಯ ಗೊಂದಲ ಕಡೆಗಣಿಸಿದ ಸರ್ಕಾರ

Published:
Updated:

ಬೆಂಗಳೂರು: ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಅಂತಿಮ ನೇಮಕಾತಿ ಪಟ್ಟಿಯನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರ ಸೂಚನೆಯಂತೆ ಕೆಇಎ ಮಂಗಳವಾರ ಸಂಜೆ ಪ್ರಕಟಿಸಿದೆ.

ಇತಿಹಾಸ ಮತ್ತು ರಾಜ್ಯಶಾಸ್ತ್ರ ವಿಷಯಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕೆಲವು ಗೊಂದಲಗಳಿರುವ ಕಾರಣ ವಿಷಯ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಒಂದು ವಾರದೊಳಗೆ ಈ ವಿಷಯಗಳ ನೇಮಕಾತಿ ಪಟ್ಟಿಯನ್ನೂ ಪ್ರಕಟಿಸಬೇಕೆಂದು ಸಚಿವರು ಸೂಚಿಸಿದ್ದಾರೆ. ಆದರೆ ಕನ್ನಡ ಪತ್ರಿಕೆಯ ಗೊಂದಲವನ್ನು ಸರ್ಕಾರ ಕಡೆಗಣಿಸಿದೆ.

ಮಾಹಿತಿಗೆ http://kea.kar.nic.in.

 

ಪ್ರತಿಕ್ರಿಯಿಸಿ (+)