ಶನಿವಾರ, ಅಕ್ಟೋಬರ್ 19, 2019
28 °C

ಪ್ರಾಂಶುಪಾಲರ ಹುದ್ದೆ ಪದೋನ್ನತಿಗೆ ಆಗ್ರಹ | ಉಪನ್ಯಾಸಕರ ಹೋರಾಟದ ಎಚ್ಚರಿಕೆ

Published:
Updated:

ಬೆಂಗಳೂರು: ರಾಜ್ಯದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ 600ಕ್ಕಿಂತ ಅಧಿಕ ಪ್ರಾಂಶುಪಾಲರ ಹುದ್ದೆಗಳು ಖಾಲಿಇದ್ದು, ಪದೋನ್ನತಿ ಮೂಲಕ ಅವುಗಳನ್ನು ಭರ್ತಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಒತ್ತಾಯಿಸಿದೆ.

ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಮತ್ತು ಕಾರ್ಯಾಧ್ಯಕ್ಷ ಎಸ್. ಆರ್‌. ವೆಂಕಟೇಶ್‌ ಅವರು ಈ ಸಂಬಂಧ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದು, ವರ್ಗಾವಣೆ ಕಾಯ್ದೆ ಪ್ರಕಾರವೇ ವರ್ಗಾವಣೆ ಮಾಡಬೇಕು, ಉಪನ್ಯಾಸಕರ ಜ್ಯೇಷ್ಠತಾ ಪಟ್ಟಿಯಲ್ಲಿರುವ ನ್ಯೂನತೆ ಸರಿಪಡಿಸಬೇಕು, ಕಲ್ಯಾಣ ಕರ್ನಾಟಕ ಭಾಗದ ಪ್ರಾಂಶುಪಾಲರಿಗೆ ಆಗುವ ಅನ್ಯಾಯ ನಿವಾರಿಸಬೇಕು ಎಂಬ ಬೇಡಿಕೆ ಸಹಿತ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಇವುಗಳ ಕುರಿತಂತೆ ನವೆಂಬರ್‌ 1ರೊಳಗೆ ಸಂಘದ ಪದಾಧಿಕಾರಿಗಳ ಸಭೆ ಕರೆಯಬೇಕು, ಇಲ್ಲವಾದರೆ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.

Post Comments (+)