ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಮರು ಮೌಲ್ಯಮಾಪನ: ಹೆಚ್ಚುವರಿ 6 ಅಂಕ ಗಳಿಸಿದ ಶರತ್‌ಚಂದ್ರ ರಾಜ್ಯಕ್ಕೇ ಪ್ರಥಮ

Last Updated 25 ಮೇ 2019, 17:22 IST
ಅಕ್ಷರ ಗಾತ್ರ

ಶಿವಮೊಗ್ಗ: ಜಾವಳ್ಳಿಯ ಅರವಿಂದೊ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಆರ್.ಶರತ್‌ಚಂದ್ರ ಅವರು ಮರು ಮೌಲ್ಯಮಾಪನದ ನಂತರ ಹೆಚ್ಚುವರಿ 6 ಅಂಕಗಳನ್ನು ಗಳಿಸಿದ್ದು, ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿದ್ದಾರೆ.

ಪಿಯು ಫಲಿತಾಂಶ ಪ್ರಕಟವಾದಾಗ ಶರತ್ 600ಕ್ಕೆ 588 ಅಂಕ ಗಳಿಸಿದ್ದರು. ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರದಲ್ಲಿ ತಲಾ 100 ಅಂಕ ಪಡೆದಿದ್ದರು. ಕನ್ನಡದಲ್ಲಿ 98 ಹಾಗೂ ಇಂಗ್ಲಿಷ್‌ನಲ್ಲಿ 90 ಅಂಕ ಗಳಿಸಿದ್ದರು. ಮರು ಮೌಲ್ಯಮಾಪನದ ನಂತರ ಇಂಗ್ಲಿಷ್‌ ಭಾಷಾ ವಿಷಯದಲ್ಲಿ 96 ಅಂಕ ಬಂದಿದವೆ. ಇದರಿಂದ ಅವರ ಒಟ್ಟು ಅಂಕಗಳು 594 ಆಗಿದೆ.

ಈ ವಿದ್ಯಾರ್ಥಿ ಸಿಇಟಿಯ ಕೃಷಿ ವಿಭಾಗದಲ್ಲಿ 4ನೇ ರ್‍ಯಾಂಕ್, ಎಂಜಿನಿಯರಿಂಗ್ ವಿಭಾಗದಲ್ಲಿ 42ನೇ ರ್‍ಯಾಂಕ್, ಪಶು ವೈದ್ಯಕೀಯದಲ್ಲಿ 76ನೇ ರ್‍ಯಾಂಕ್ ಪಡೆದಿರುತ್ತಾರೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT