ಹಳೇ ವಿದ್ಯಾರ್ಥಿಗಳಿಗೆ ಹಳೇ ಪಠ್ಯಕ್ರಮ

7

ಹಳೇ ವಿದ್ಯಾರ್ಥಿಗಳಿಗೆ ಹಳೇ ಪಠ್ಯಕ್ರಮ

Published:
Updated:

ಬೆಂಗಳೂರು: 2017–18ನೇ ಸಾಲಿನಿಂದ ಪ್ರಥಮ ಪಿಯುಸಿಯಲ್ಲಿ ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ ಹಾಗೂ ಅರ್ಥಶಾಸ್ತ್ರ ವಿಷಯಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಲು ಹೊಸ ಪಠ್ಯಕ್ರಮ (ಎನ್‌ಸಿಇಆರ್‌ಟಿ) ಅಳವಡಿಸಲಾಗಿದೆ. 

2016–17ನೇ ಸಾಲಿನವರೆಗೂ ಈ ವಿಷಯಗಳನ್ನು ಹಳೆಯ ಪಠ್ಯ ಕ್ರಮದಲ್ಲಿ ವ್ಯಾಸಂಗ ಮಾಡಿ, ಅನುತ್ತೀರ್ಣ ಗೊಂಡಿರುವ ವಿದ್ಯಾರ್ಥಿಗಳು, 2013–14 ರಿಂದ 2016–17ರ ವರೆಗೆ ನಿಗದಿಪಡಿಸಿದ್ದ ಪಠ್ಯಕ್ರಮದಲ್ಲಿಯೇ ಪ್ರಥಮ ಪಿಯುಸಿ ಪರೀಕ್ಷೆ ಬರೆಯಬೇಕು.

ದ್ವಿತೀಯ ಪಿಯುಸಿ: 2018–19ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹೊಸ ವಿದ್ಯಾರ್ಥಿಗಳು ಮತ್ತು ಮಾರ್ಚ್‌ 2019ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡ ಖಾಸಗಿ ಅಭ್ಯರ್ಥಿಗಳು ಹೊಸ ಪಠ್ಯಕ್ರಮದಲ್ಲಿಯೇ (ಎನ್‌ಸಿಇಆರ್‌ಟಿ) ಪರೀಕ್ಷೆ ಬರೆಯಬೇಕು.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವ ಹೊಸ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಇನ್ನುಳಿದ ಪುನರಾವರ್ತಿತ (ರಿಪೀಟರ್ಸ್‌) ವಿದ್ಯಾರ್ಥಿಗಳು ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ ಹಾಗೂ ಅರ್ಥಶಾಸ್ತ್ರ ವಿಷಯಗಳನ್ನು 2014–15ರಿಂದ 2017–18ರ ವರೆಗೆ ನಿಗದಿಪಡಿಸಿದ್ದ ಪಠ್ಯಕ್ರಮದಲ್ಲಿ ಪರೀಕ್ಷೆ ಬರೆಯಲು ಅವಕಾಶ ಇದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !