ಪಿಯು: ಉಡುಪಿಗೆ ಅಗ್ರಸ್ಥಾನ, ಸ್ವಾತಿ, ರಯೀಸಾ ರಾಜ್ಯಕ್ಕೆ 3ನೇ ರ‍್ಯಾಂಕ್

ಶುಕ್ರವಾರ, ಏಪ್ರಿಲ್ 19, 2019
22 °C
ಶೇ 92.20 ಫಲಿತಾಂಶ

ಪಿಯು: ಉಡುಪಿಗೆ ಅಗ್ರಸ್ಥಾನ, ಸ್ವಾತಿ, ರಯೀಸಾ ರಾಜ್ಯಕ್ಕೆ 3ನೇ ರ‍್ಯಾಂಕ್

Published:
Updated:

ಉಡುಪಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆ ಪಾರಮ್ಯ ಮೆರೆದಿದೆ. ಶೇ 92.20 ಫಲಿತಾಂಶ ಪಡೆಯುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದೆ.

ಫಲಿತಾಂಶ ಪ್ರಮಾಣ ಹೆಚ್ಚಳ:

2018ನೇ ಸಾಲಿನಲ್ಲಿ ಉಡುಪಿ ಜಿಲ್ಲೆ ಶೇ 90.67 ಫಲಿತಾಂಶ ಪಡೆಯುವ ಮೂಲಕ ರಾಜ್ಯಕ್ಕೆ 2ನೇ ಸ್ಥಾನ ಪಡೆದುಕೊಂಡಿತ್ತು. ಈ ಬಾರಿ ಶೇ 92.20 ಫಲಿತಾಂಶ ಪಡೆದುಕೊಂಡು ಅಗ್ರಪಟ್ಟ ಅಲಂಕರಿಸಿದೆ. ಕಳೆದ ಬಾರಿಗಿಂತ ಈ ಬಾರಿಯ ಫಲಿತಾಂಶ ಶೇ 1.53 ಹೆಚ್ಚಾಗಿರುವುದು ವಿಶೇಷ. 

ಇಬ್ಬರಿಗೆ ಮೂರನೇ ರ‍್ಯಾಂಕ್‌

ವಿಜ್ಞಾನ ವಿಭಾಗದಲ್ಲಿ ಉಡುಪಿಯ ಎಂಜಿಎಂ (ಮಹಾತ್ಮಗಾಂಧಿ ಮೊಮೋರಿಯಲ್) ವಿಜ್ಞಾನ ಕಾಲೇಜಿನ ಸ್ವಾತಿ (592 ಅಂಕ) ಹಾಗೂ ಕಾರ್ಕಳ ತಾಲ್ಲೂಕಿನ ಹೆಬ್ರಿಯ ಕಿನ್ನಿಗುಡ್ಡೆ ಎಸ್‌.ಆರ್‌. ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿನಿ ರಯೀಸಾ (592 ಅಂಕ) ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಜತೆಗೆ, ಜಿಲ್ಲೆಗೆ ಮೊದಲ ಸ್ಥಾನವನ್ನು ಜಂಟಿಯಾಗಿ ಹಂಚಿಕೊಂಡಿದ್ದಾರೆ.

ಮಾರ್ಚ್‌ 1ರಿಂದ 18ರವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು 15,397 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ 14,025 ಸಾಮಾನ್ಯ (ಫ್ರೆಷರ್ಸ್‌), 943 ಖಾಸಗಿ ಹಾಗೂ 429 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆ ಬರೆದವರ ಪೈಕಿ 13,485 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಬಾಲಕಿಯರೇ ಮೇಲುಗೈ:

ಜಿಲ್ಲಾವಾರು ಫಲಿತಾಂಶದಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಈ ಬಾರಿ 7,464 ಬಾಲಕರು ಹಾಗೂ 7,933 ಬಾಲಕಿಯರು ಪರೀಕ್ಷೆಗೆ ಕುಳಿತಿದ್ದರು. ಇವರ ಪೈಕಿ 6,228 ಬಾಲಕರು ಉತ್ತೀರ್ಣರಾದರೆ, 7,257 ಬಾಲಕಿಯರು ಪಾಸ್ ಆಗಿದ್ದಾರೆ.

ಹಳ್ಳಿ ವಿದ್ಯಾರ್ಥಿಗಳೇ ಟಾಪ್‌:

ನಗರದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ತೋರಿದ್ದಾರೆ. ಗ್ರಾಮೀಣ ಭಾಗದಿಂದ ಪರೀಕ್ಷೆ ಬರೆದ 8,162 ವಿದ್ಯಾರ್ಥಿಗಳ ಪೈಕಿ 7,298 ಮಂದಿ ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶಗಳ 7,235 ವಿದ್ಯಾರ್ಥಿಗಳ ಪೈಕಿ 6,187 ಮಂದಿ ತೇರ್ಗಡೆಯಾಗಿದ್ದಾರೆ. ಇಲ್ಲಿಯೂ ಹಳ್ಳಿಯ ಹುಡುಗಿಯರು ನಗರದ ಹುಡುಗಿಯರಿಗಿಂತ ಮುಂದಿರುವುದನ್ನು ಕಾಣಬಹುದು. ಗ್ರಾಮೀಣ ಭಾಗದಿಂದ ಪರೀಕ್ಷೆ ಬರೆದ 4,189 ವಿದ್ಯಾರ್ಥಿನಿಯರ ಪೈಕಿ 3,866 ಮಂದಿ ಪಾಸ್ ಆಗಿದ್ದಾರೆ. ನಗರ ಪ್ರದೇಶದಿಂದ ಪರೀಕ್ಷೆಗೆ ಹಾಜರಾದ 3,744 ವಿದ್ಯಾರ್ಥಿನಿಯರ ಪೈಕಿ 3391 ಮಂದಿ ಉತ್ತೀರ್ಣರಾಗಿದ್ದಾರೆ.

ಇಂಗ್ಲಿಷ್‌ ಮಾಧ್ಯಮ ಮುಂದೆ:

ಜಿಲ್ಲೆಯಲ್ಲಿ ಪರೀಕ್ಷೆಗೆ ಕುಳಿತ 11,838 ಇಂಗ್ಲೀಷ್‌ ಮೀಡಿಯಂ ವಿದ್ಯಾರ್ಥಿಗಳಲ್ಲಿ 10,702 ಜನ ಪಾಸ್ ಆಗಿದ್ದಾರೆ. ಕನ್ನಡ ಮಾಧ್ಯಮದಿಂದ ಪರೀಕ್ಷೆಗೆ ಹಾಜರಾಗಿದ್ದ 3,559 ವಿದ್ಯಾರ್ಥಿಗಳಲ್ಲಿ 2,783 ಮಂದಿ ಉತ್ತೀರ್ಣರಾಗಿದ್ದಾರೆ.

ಕಳೆದ 15 ವರ್ಷಗಳಲ್ಲಿ ಜಿಲ್ಲೆಯ ಸಾಧನೆ

ವರ್ಷ–ಶೇಕಡಾ ಫಲಿತಾಂಶ–ಸ್ಥಾನ

2005–75.26–ದ್ವಿತೀಯ

2006–79.96–ಪ್ರಥಮ

2007–79.65–ದ್ವಿತೀಯ

2008–76.20–ದ್ವಿತೀಯ

2009–80.39–ದ್ವಿತೀಯ

2010–89.08–ಪ್ರಥಮ

2011–87.15–ಪ್ರಥಮ

2012–85.32–ದ್ವಿತೀಯ

2013–92.72–ಪ್ರಥಮ

2014–90.93–ದ್ವಿತೀಯ

2015–92.32–ದ್ವಿತೀಯ

2016–90.35–ದ್ವಿತೀಯ

2017–90.01–ಪ್ರಥಮ

2018–90.67–ದ್ವಿತೀಯ

2019–92.20–ಪ್ರಥಮ 

ಅದ್ವಿತೀಯ ಸಾಧನೆ

ಕಳೆದ 15 ವರ್ಷಗಳ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಒಮ್ಮೆಯೂ ತೃತೀಯ ಸ್ಥಾನಕ್ಕೆ ಕುಸಿದಿಲ್ಲ. 2005, 07, 08, 09, 12, 14, 15, 16, 18ನೇ ಸಾಲಿನಲ್ಲಿ ದ್ವಿತೀಯ ಸ್ಥಾನ ಪಡೆದರೆ, 2006, 10,11,13,17,19ರಲ್ಲಿ ಪ್ರಥಮ ಸ್ಥಾನ ಪಡೆದಿರುವುದು ವಿಶೇಷ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !