ಶಿಶಿಲರ ಕಾದಂಬರಿ ‘ಪುಂಸ್ತ್ರಿ’ 11 ಭಾಷೆಗಳಿಗೆ ಭಾಷಾಂತರ

7

ಶಿಶಿಲರ ಕಾದಂಬರಿ ‘ಪುಂಸ್ತ್ರಿ’ 11 ಭಾಷೆಗಳಿಗೆ ಭಾಷಾಂತರ

Published:
Updated:
Prajavani

ಸುಳ್ಯ: ಹಿರಿಯ ಸಾಹಿತಿ ಡಾ. ಪ್ರಭಾಕರ ಶಿಶಿಲ ಅವರ ಮಹಾಭಾರತ ಆಧಾರಿತ ಕಾದಂಬರಿ ‘ಪುಂಸ್ತ್ರಿ’ 11 ಭಾಷೆಗಳಿಗೆ ಭಾಷಾಂತರಗೊಳ್ಳುತ್ತಿದೆ.

ಈ ಕೃತಿ ಈಗಾಗಲೇ ಸಂಸ್ಕೃತ ಮತ್ತು ತೆಲುಗಿಗೆ ಭಾಷಾಂತರಗೊಂಡು ಪ್ರಕಟಗೊಂಡಿದೆ. ಸುಳ್ಯ ಮತ್ತು ಕೊಡಗು ಜಿಲ್ಲೆಯಲ್ಲಿ ಪ್ರಭಾವಿ ಭಾಷೆ ಆಗಿರುವ ಅರೆಭಾಷೆಗೆ ಅನುವಾದಗೊಂಡು ಪ್ರಕಟಣೆ ಹಂತದಲ್ಲಿದೆ. ತುಳು, ಕೊಡವ, ಕೊಂಕಣಿ, ಮರಾಠಿ, ತಮಿಳು, ಮಲಯಾಳ, ಗುಜರಾತಿ ಮತ್ತು ಹಿಂದಿ ಭಾಷೆಗೆ ಅನುವಾದಗೊಳ್ಳುತ್ತಿದೆ. ಅಮೆರಿಕದಲ್ಲಿರುವ ಭಾರತೀಯರೊಬ್ಬರು ಇದನ್ನು ಇಂಗ್ಲಿಷ್‌ಗೆ ಅನುವಾದ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಯಕ್ಷಗಾನಕ್ಕೂ ರೂಪಾಂತರಗೊಳ್ಳಲಿದೆ ಎಂದು ಶಿಶಿಲ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !