ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಗ್ಯಂ ಗ್ರಾಮದಲ್ಲಿ ಅಸ್ಪೃಶ್ಯತೆ; ಅಧಿಕಾರಿಗಳ ಪರಿಶೀಲನೆ

‘ಪ್ರಜಾವಾಣಿ’ ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ
Last Updated 23 ಜುಲೈ 2019, 19:38 IST
ಅಕ್ಷರ ಗಾತ್ರ

ಹನೂರು:ತಾಲ್ಲೂಕಿನಹೂಗ್ಯಂಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಜೀವಂತವಾಗಿರುವ ಬಗ್ಗೆ ‘ಪ್ರಜಾವಾಣಿ’ಯ ಮಂಗಳವಾರದ ಸಂಚಿಕೆಯಲ್ಲಿ ಪ್ರಕಟವಾಗಿರುವ ವಿಶೇಷ ವರದಿಯಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತದ ಅಧಿಕಾರಿಗಳು, ಮಂಗಳವಾರ ಗ್ರಾಮಕ್ಕೆ ದೌಡಾಯಿಸಿ ಸ್ಥಳೀಯರಿಂದ ಮಾಹಿತಿ ಕಲೆ ಹಾಕಿದರು.

ಸಮಾಜ ಕಲ್ಯಾಣಇಲಾಖೆಯಪ್ರಭಾರಉಪನಿರ್ದೇಶಕ ಎಸ್.ಹೊನ್ನೇಗೌಡ, ಹನೂರುತಹಶೀಲ್ದಾರ್‌ ನಾಗರಾಜು, ಸ್ಥಳೀಯ ಪೊಲೀಸರು ಸೇರಿದಂತೆ ವಿವಿಧ ಅಧಿಕಾರಿಗಳು ಗ್ರಾಮದ ದಲಿತರಕಾಲೋನಿಗಳಿಗೆ ಭೇಟಿ ನೀಡಿ ಅಸ್ಪೃಶ್ಯತೆಆಚರಣೆ ಬಗ್ಗೆ ಮಾಹಿತಿ ಸಂಗ್ರಹಿಸಿದರು.

‘ಪ್ರಜಾವಾಣಿ’ಯ ವಿಶೇಷ ವರದಿಗೆ ಸ್ಪಂದಿಸಿದ್ದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸ್ಥಳಕ್ಕೆ ತಕ್ಷಣ ತೆರಳಿ ಪರಿಶೀಲನೆ ನಡೆಸುವಂತೆ ಸೂಚಿಸಿದ್ದರು. ಅದರಂತೆ ಅಧಿಕಾರಿಗಳ ತಂಡ ಭೇಟಿ ನೀಡಿದೆ.

ಅನಿಷ್ಟ ಪದ್ಧತಿಯನ್ನು ಬಿಚ್ಚಿಟ್ಟ ಮಹಿಳೆಯರು: ಗ್ರಾಮದಲ್ಲಿ ಇನ್ನೂ ಅಸ್ಪೃಶ್ಯತೆ ಆಚರಣೆಯಲ್ಲಿರುವುದನ್ನು ದಲಿತ ಸಮುದಾಯದ ಮಹಿಳೆಯರು ಅಧಿಕಾರಿಗಳ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟರು.

‘ಶಾಲಾಮಕ್ಕಳಿಗೆಇಲ್ಲಿನಅಂಗಡಿಗಳಲ್ಲಿಕ್ಷೌರ ಮಾಡುತ್ತಿಲ್ಲ. ಇದನ್ನುಪ್ರಶ್ನಿಸಿದರೆ, ‘ನಿಮಗೆಕ್ಷೌರಮಾಡುವಬದಲುಅಂಗಡಿಯನ್ನೇ ಮುಚ್ಚುತ್ತೇವೆ’ ಎನ್ನುತ್ತಾರೆ.ಮಕ್ಕಳಿಗೆಕ್ಷೌರಮಾಡಿಸಲುನಾವು ಮಾರ್ಟಳ್ಳಿ,ರಾಮಾಪುರಮತ್ತುಹನೂರಿಗೆತೆರಳಬೇಕಿದೆ. ಈಹಿಂದೆಇದೇಸಮಸ್ಯೆ ಉಂಟಾದಾಗ ಅಧಿಕಾರಿಗಳುಗ್ರಾಮಕ್ಕೆಬಂದುಸಭೆ ನಡೆಸಿಮುಂದೆಇಂಥಪ್ರಕರಣಗಳು ಮರುಕಳಿಸಬಾರದು ಎಂದು ಎಚ್ಚರಿಸಿದ್ದರು. ಅಧಿಕಾರಿಗಳಮುಂದೆ ಒಪ್ಪಿಕೊಂಡಿದ್ದ ಅಂಗಡಿಮಾಲೀಕರು,ತಿಂಗಳಬಳಿಕಪುನಃಮಕ್ಕಳಿಗೆ ಹಾಗೂನಮ್ಮ ಸಮುದಾಯದಜನರಿಗೆಕ್ಷೌರ ಮಾಡಲು ನಿರಾಕರಿಸುತ್ತಿದ್ದಾರೆ’ ಎಂದುಪಟ್ಟಮ್ಮಆರೋಪಿಸಿದರು.

ತಮಟೆ ಬಾರಿಸಲು ನಾವು: ‘ಗ್ರಾಮದಲ್ಲಿರುವಏಳುದಂಡುಮಾರಮ್ಮ, ಕಾಶೀ ವಿಶ್ವನಾಥ ದೇವಾಲಯಗಳಲ್ಲಿ ಹಬ್ಬದಸಂದರ್ಭದಲ್ಲಿ ತಮಟೆಹೊಡೆಯಲುನಮ್ಮ ಸಮುದಾಯದ ಯುವಕರನ್ನುಬಳಸಿಕೊಳ್ಳುತ್ತಾರೆ.ಆದರೆ, ದೇವಾಲಯದಒಳಗೆಬಿಡುವುದಿಲ್ಲ. ಇದನ್ನು ವಿರೋಧಿಸಿದ್ದರಿಂದನಮ್ಮಸಮುದಾಯದಜನರಿಗೆ ಸುತ್ತಮುತ್ತಲಯಾವಜಮೀನಿನಲ್ಲೂಕೂಲಿ ಕೆಲಸ ನೀಡುತ್ತಿಲ್ಲ.ನಮ್ಮನ್ನು ಮಾತನಾಡಿಸಿದವರಿಗೆ ₹50 ಸಾವಿರ ದಂಡವಿಧಿಸಲಾಗುವುದುಎಂದುಸಾರಿದ್ದಾರೆ.ಹೀಗಾದರೆನಾವುಬದುಕುವುದುಹೇಗೆ’ ಎಂದುಗ್ರಾಮದ ಮಾಗಳಮ್ಮಅಧಿಕಾರಿಗಳಮುಂದೆತಮ್ಮಅಳಲುತೋಡಿಕೊಂಡರು.

ಶೀಘ್ರ ಸಭೆ:ಮಹಿಳೆಯರ ದೂರುಗಳನ್ನು ಆಲಿಸಿದ ನಂತರ ಪ್ರತಿಕ್ರಿಯಿಸಿದ ಹೊನ್ನೇಗೌಡ ಅವರು, ಆಧುನಿಕಯುಗದಲ್ಲೂಇಂಥಅನಿಷ್ಟಪದ್ಧತಿ ಜೀವಂತವಾಗಿರುವುದು ವಿಷಾದನೀಯ. ಶೀಘ್ರದಲ್ಲೇ ದಿನಾಂಕನಿಗದಿಪಡಿಸಿ ಸಭೆನಡೆಸಲಾಗುವುದು. ಈ ಸಂಬಂಧಗ್ರಾಮ ಲೆಕ್ಕಾಧಿಕಾರಿ ಮೂಲಕ ಎಲ್ಲಾ ಸಮುದಾಯದಮುಖಂಡರಿಗೂ ಪತ್ರದಮುಖೇನ ತಿಳಿಸಲಾಗುವುದು.ಕಡ್ಡಾಯವಾಗಿ ಎಲ್ಲರೂ ಸಭೆಗೆ ಹಾಜರಾಗಬೇಕು’ ಎಂದು ಸೂಚಿಸಿದರು.

ಅಂಗಡಿಮಾಲೀಕರಿಗೆಎಚ್ಚರಿಕೆ:ಇದಕ್ಕೂಮುನ್ನ ಹೂಗ್ಯಂಗ್ರಾಮದಹೋಟೆಲ್ಹಾಗೂಅಂಗಡಿ ಮಾಲೀಕರನ್ನು ರಾಮಾಪುರ ಠಾಣೆಗೆ ಕರೆಸಿಕೊಂಡ ಪೊಲೀಸರು, ಎಚ್ಚರಿಕೆ ನೀಡಿದರು.

ಸಿಪಿಐಮನೋಜ್ಕುಮಾರ್ಮಾತನಾಡಿ, ‘ದಲಿತರಿಗೆ ಪ್ರವೇಶನಿಷೇಧಿಸಿರುವ ಅಂಗಡಿ ಮಾಲೀಕರು, ಕೂಡಲೇತಮ್ಮ ಮನೋಭಾವನೆ ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ದರೆಅಂಗಡಿಗಳನ್ನೇ ಬಂದ್ಮಾಡಬೇಕು. ಇದನ್ನುಉಲ್ಲಂಘಿಸಿದವರ ವಿರುದ್ಧಕಠಿಣಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.

ಉಪ ತಹಶಿಲ್ದಾರ್ ರಾಜಾಕಾಂತ್, ಗ್ರಾಮಲೆಕ್ಕಾಧಿಕಾರಿ ಶರವಣ, ಇತರರು ಇದ್ದರು.

ಅಸ್ಪೃಶ್ಯತೆ ಆಚರಣೆ ಒಪ್ಪಿಕೊಂಡ ಆರ್ಚಕ

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಜಯಕಾಂತ‌ ಅವರು ಅಸ್ಪೃಶ್ಯತೆ ಆಚರಣೆ ಬಗ್ಗೆ ಕಾಶಿ ವಿಶ್ವನಾಥ ದೇವಾಲಯದ ಆರ್ಚಕರ ಬಳಿ ಕೇಳಿದಾಗ, ದಲಿತರಿಗೆ ಪ್ರವೇಶ ನಿರಾಕರಿಸಿರುವುದನ್ನು ಒಪ್ಪಿಕೊಂಡರು.

‘ಈ ದೇವಾಲಯದೊಳಗೆ ದಲಿತರಿಗೆ ಪ್ರವೇಶವಿಲ್ಲ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಅದನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿದ್ದೇವೆ’ ಎಂದು ಅರ್ಚಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT