ನವೋದಯ ಪರೀಕ್ಷೆ ಪ್ರಶ್ನೆ ಪತ್ರಿಕೆ ಅದಲು ಬದಲು

ಶುಕ್ರವಾರ, ಏಪ್ರಿಲ್ 26, 2019
35 °C

ನವೋದಯ ಪರೀಕ್ಷೆ ಪ್ರಶ್ನೆ ಪತ್ರಿಕೆ ಅದಲು ಬದಲು

Published:
Updated:

ಸುರಪುರ (ಯಾದಗಿರಿ ಜಿಲ್ಲೆ): ನಗರದ ಕುಂಬಾರಪೇಟೆಯ ಪ್ರೇರಣಾ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಶನಿವಾರ ಕೊಠಡಿ ಮೇಲ್ವಿಚಾರಕರ ಅಚಾತುರ್ಯದಿಂದ ಜವಾಹರ ನವೋದಯ ಪ್ರವೇಶ ಪರೀಕ್ಷೆಯ 19 ವಿದ್ಯಾರ್ಥಿಗಳ ಪ್ರಶ್ನೆಪತ್ರಿಕೆ ಅದಲು ಬದಲಾಗಿದ್ದವು.

ಇಂಗ್ಲಿಷ್‌ ಮಾಧ್ಯಮ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಮಾಧ್ಯಮ ಪ್ರಶ್ನೆ ಪತ್ರಿಕೆ  ವಿತರಿಸಲಾಗಿತ್ತು. ಎರಡೂ ಮಾಧ್ಯಮಗಳ ವಿದ್ಯಾರ್ಥಿಗಳು ಇದನ್ನು ಗಮನಿಸಿದೆ ಅರ್ಧ ಗಂಟೆ ಪರೀಕ್ಷೆ ಬರೆದಿದ್ದಾರೆ. ನಂತರ ವಿದ್ಯಾರ್ಥಿಗಳಲ್ಲಿ ಗುಸು ಗುಸು ಪ್ರಾರಂಭಗೊಂಡಾಗ ಮೇಲ್ವಿಚಾರಕರ ಗಮನಕ್ಕೆ ಬಂದಿದೆ.

ಆಗ ಅವರು ಪ್ರಶ್ನೆಪತ್ರಿಕೆಗಳನ್ನು ವಾಪಸ್ಸು ಪಡೆದು ಮಕ್ಕಳು ಗುರುತಿಸಿದ್ದ ಮಾರ್ಕ್‍ಗಳಿಗೆ ವೈಟ್ನರ್‌ ಹಚ್ಚಿ, ಕ್ರಮಸಂಖ್ಯೆ ಅನುಸಾರ ಪ್ರಶ್ನೆ
ಪತ್ರಿಕೆಗಳನ್ನು ವಿತರಿಸಿದ್ದಾರೆ. ಅಷ್ಟೊತ್ತಿಗಾಗಲೆ ಪರೀಕ್ಷೆ ಆರಂಭಗೊಂಡು ಒಂದು ಗಂಟೆ ಕಳೆದುಹೋಗಿದೆ. 19 ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ಬಂದಿದ್ದು, ಮರು ಪರೀಕ್ಷೆ ನಡೆಸಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.

ಕೊಠಡಿ ಮೇಲ್ವಿಚಾರಕರ ನಿರ್ಲಕ್ಷವೇ ಈ ತಪ್ಪಿಗೆ ಕಾರಣ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನ ಓಲೇಕಾರ ಪ್ರತಿಕ್ರಿಯಿಸಿದರು.

‘ದೆಹಲಿ ಮತ್ತು ಬೆಂಗಳೂರಿನ ಕೇಂದ್ರ ಕಚೇರಿಗೆ ವರದಿ ಸಲ್ಲಿಸಿದ್ದೇವೆ. 19 ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಪ್ರತ್ಯೇಕವಾಗಿ ಪರೀಕ್ಷಾ ವಿಭಾಗಕ್ಕೆ ಕಳುಹಿಸಿದ್ದು, ಅವುಗಳನ್ನು ಮ್ಯಾನ್ಯುವಲ್ ಆಗಿ ಮೌಲ್ಯಮಾಪನ ಮಾಡುವ ವಿಶ್ವಾಸ ಇದೆ’ ಎನ್ನುತ್ತಾರೆ ಹೋತಪೇಟೆ ನವೋದಯ ವಿದ್ಯಾಲಯ ಪ್ರಾಂಶಪಾಲ ಎಂ.ಕೆ. ಜಗದೀಶ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !