ನಾಟಿ ಕೋಳಿ ಸಾಂಬಾರ್ ಜತೆ ಏಳು ಮುದ್ದೆ ಉಂಡ ‘ಮೀಸೆ ಈರೇಗೌಡ’

7

ನಾಟಿ ಕೋಳಿ ಸಾಂಬಾರ್ ಜತೆ ಏಳು ಮುದ್ದೆ ಉಂಡ ‘ಮೀಸೆ ಈರೇಗೌಡ’

Published:
Updated:

ಮಂಡ್ಯ: ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ಭಾನುವಾರ ನಾಟಿ ಕೋಳಿ ಸಾಂಬಾರ್ ಜತೆ ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಮೀಸೆ ಈರೇಗೌಡ ಅವರು ಏಳು ಮುದ್ದೆ ತಿಂದಿದ್ದಾರೆ.

‘ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ಹಾಗೂ ಪಾರಿತೋಷಕ ವಿತರಣೆ ಮಾಡಲಾಯಿತು. ಪ್ರಥಮ ಬಹುಮಾನ ₹ 5 ಸಾವಿರ, ದ್ವಿತೀಯ ₹ 3 ಸಾವಿರ, ತೃತೀಯ ₹ 2 ಸಾವಿರ, ಸಮಾಧಾನಕರ ಬಹುಮಾನ ಪಡೆದ ಇಬ್ಬರಿಗೆ ತಲಾ ₹ 1 ಸಾವಿರ ಬಹುಮಾನ ವಿತರಣೆ ಮಾಡಲಾಯಿತು.

ವೀರಾಂಜನೇಯ ಸೇವಾ ಸಮಿತಿ, ನಮ್ ಹೈಕ್ಳು ತಂಡ ಹಾಗೂ ಜನತಾ ಟಾಕೀಸ್ ಸಂಸ್ಥೆಗಳ ಸಹಯೋಗದೊಂದಿಗೆ ಸ್ಪರ್ಧೆ ಆಯೋಜಿಸಲಾಗಿತ್ತು.

‘ಜನಪದ ಕಲೆ, ಕ್ರೀಡೆಗಳು ನಶಿಸುತ್ತಿರುವ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಮರುಜೀವ ನೀಡುವ ಉದ್ದೇಶದಿಂದ ರಾಗಿ ಮುದ್ದೆ ಉಣ್ಣುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.  ಸ್ಪರ್ಧೆಯಲ್ಲಿ ಅತೀ ಹೆಚ್ಚು ಮುದ್ದೆ ಉಂಡವರಿಗೆ ‘ಆನೆಬಲ’ ಚಲನಚಿತ್ರದಲ್ಲಿ ಅಭಿನಯಿಸುವ ಅವಕಾಶ ನೀಡಲಾಗುವುದು’ ಎಂದು ನೆಲದನಿ ಬಳಗದ ಅಧ್ಯಕ್ಷ ಎಂ.ಸಿ.ಲಂಕೇಶ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.


 ಸ್ಪರ್ಧೆಯಲ್ಲಿ ವಿಜೇತರಾದವರನ್ನು ಸನ್ಮಾನಿಸಲಾಯಿತು. 
 

Tags: 

ಬರಹ ಇಷ್ಟವಾಯಿತೆ?

 • 24

  Happy
 • 2

  Amused
 • 3

  Sad
 • 5

  Frustrated
 • 4

  Angry

Comments:

0 comments

Write the first review for this !