ಗುರುವಾರ , ನವೆಂಬರ್ 21, 2019
26 °C

ವಿಚಾರಣೆ ವೇಳೆ ಯುವಕ ಸಾವು: ಕಲ್ಲು ತೂರಾಟ

Published:
Updated:
Prajavani

ರಾಯಚೂರು: ಪೊಲೀಸರು ವಿಚಾರಣೆಗಾಗಿ ಕರೆದುಕೊಂಡ ಬಂದಿದ್ದ ಯುವಕ ಮೃತಪಟ್ಟಿದ್ದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಪೊಲೀಸ್ ಠಾಣೆ ಮತ್ತು ವಾಹನಗಳಿಗೆ ಕಲ್ಲು ತೂರಿ ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಬ್ಬೂರು ಹೋಬಳಿ ಕೇಂದ್ರದಲ್ಲಿ ಭಾನುವಾರ ನಡೆದಿದೆ.

ಗಬ್ಬೂರು ನಿವಾಸಿ ಶಿವಕುಮಾರ್ ಇಳಿಗೇರ (20) ಮೃತ ಯುವಕ. ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಇದೆ. ಘಟನೆಯಲ್ಲಿ ಪೊಲೀಸ್ ಜೀಪ್ ಜಖಂಗೊಂಡಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ರಾಯಚೂರಿನಿಂದ ಪೊಲೀಸರನ್ನು ನಿಯೋಜಿಸಲಾಗಿದೆ. ದೇವದುರ್ಗ- ರಾಯಚೂರು ಮುಖ್ಯರಸ್ತೆಯಲ್ಲಿ ನೆರೆದಿದ್ದ ಜನರು ಟೈರ್‌ಗಳಿಗೆ ಬೆಂಕಿ ಇಟ್ಟು ಪ್ರತಿಭಟನೆ ನಡೆಸಿದರು.

ಪ್ರತಿಕ್ರಿಯಿಸಿ (+)