ಭಾನುವಾರ, ಆಗಸ್ಟ್ 18, 2019
24 °C

ಮಂತ್ರಾಲಯ ತಲುಪಿದ ತುಂಗಭದ್ರಾ ನೀರು, ಸಂಭ್ರಮ

Published:
Updated:

ರಾಯಚೂರು: ಹೊಸಪೇಟೆ ತುಂಗಭದ್ರಾ ಜಲಾಶಯದಿಂದ ನೀರು ಹೊರ ಹೊರಬಿಡಲಾಗುತ್ತಿದ್ದು, ಸೋಮವಾರ ಬೆಳಿಗ್ಗೆ ಮಂತ್ರಾಲಯ ತಲುಪಿತು.

ನೀರಿಲ್ಲದೆ ಬರಿದಾಗಿದ್ದ ನದಿಗೆ ಜೀವಕಳೆ ತುಂಬಿಕೊಂಡಿದ್ದು, ಆಗಸ್ಟ್ 14ರಿಂದ ರಾಯರ ಆರಾಧನಾ ಮಹೋತ್ಸವಕ್ಕೆ ಬರುವ ಭಕ್ತರು ತುಂಗಾದಲ್ಲಿ ಪುಣ್ಯಸ್ನಾನಕ್ಕೆ ಮಾಡಲು ಸಾಧ್ಯವಾಗಲಿದೆ.

ತುಂಗಭದ್ರಾ ನದಿ ನೀರು  ಬರುತ್ತಿದ್ದಂತೆ ಮಂತ್ರಾಲಯ ಮಠದಲ್ಲಿ ಸಂಭ್ರಮ ಮನೆಮಾಡಿದೆ. ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ನದಿತೀರಕ್ಕೆ ತೆರಳಿ, ಪೂಜೆ ಸಲ್ಲಿಸಿದರು.

ಇದನ್ನೂ ಓದಿ... ಶ್ರೀರಾಯರ ಆರಾಧನೆಗೆ ವೈಭವದ ಸಿದ್ಧತೆ: ಪೀಠಾಧಿಪತಿ

Post Comments (+)