ಸೋಮವಾರ, ಆಗಸ್ಟ್ 26, 2019
20 °C

ಮಳೆ, ಪ್ರವಾಹ: ರೈಲುಗಳ ಸಂಚಾರ ವ್ಯತ್ಯಯ

Published:
Updated:

ಹುಬ್ಬಳ್ಳಿ: ಮಳೆ ಹಾಗೂ ಪ್ರವಾಹದ ಕಾರಣಕ್ಕಾಗಿ ನೈರುತ್ಯ ರೈಲ್ವೆಯು 28 ರೈಲುಗಳ ಸಂಚಾರ ರದ್ದುಪಡಿಸಿದೆ.

ಆ.11ರಂದು ‌ಮಂಗಳೂರು–ಕೊಲ್ಹಾಪುರ, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್– ವಿಜಯಪುರ ಫಾಸ್ಟ್ ಪ್ಯಾಸೆಂಜರ್ 11ರಿಂದ 14ರವರೆಗೆ, ವಿಜಯಪುರ– ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ 13ರಿಂದ 15ವರೆಗೆ, ಹುಬ್ಬಳ್ಳಿ– ಲೋಕಮಾನ್ಯ ತಿಲಕ್ ಟರ್ಮಿ
ನಸ್‌ ಎಕ್ಸ್‌ಪ್ರೆಸ್ 12ರಿಂದ 17ರವರೆಗೆ, ಲೋಕಮಾನ್ಯ ತಿಲಕ್ ಟರ್ಮಿನಸ್– ಹುಬ್ಬಳ್ಳಿ 11ರಂದು, ಯಶವಂತಪುರ– ಜೈಪುರ ಎಕ್ಸ್‌ಪ್ರೆಸ್ 15ರಂದು, ಜೈಪುರ– ಯಶವಂತಪುರ ಎಕ್ಸ್‌ಪ್ರೆಸ್ 17ಕ್ಕೆ, ಗದಗ– ಛತ್ರಪತಿ ಶಿವಾಜಿ ಟರ್ಮಿನಸ್‌ ಮುಂಬೈ ಎಕ್ಸ್‌ಪ್ರೆಸ್ 13ರಿಂದ 17ರವರೆಗೆ, ಛತ್ರಪತಿ ಶಿವಾಜಿ ಟರ್ಮಿನಸ್‌ ಮುಂಬೈ ಎಕ್ಸ್‌ಪ್ರೆಸ್ – ಗದಗ ಎಕ್ಸ್‌ಪ್ರೆಸ್ 13ರಿಂದ 16ರವರೆಗೆ, ಒಕಾ– ಟ್ಯುಟಿಕಾರ್ನ್ 15ಕ್ಕೆ, ಟ್ಯುಟಿಕಾರ್ನ್– ಒಕಾ 18ಕ್ಕೆ, ಯಶವಂತಪುರ– ಬಿಕಾನೇರ್‌ ಎಕ್ಸ್‌ಪ್ರೆಸ್ 11ರಂದು, ಬಿಕಾನೇರ್– ಯಶವಂತಪುರ ಎಕ್ಸ್‌ಪ್ರೆಸ್ 11ಕ್ಕೆ, ಬಾರ್ಮೆರ್– ಯಶವಂತಪುರ ಎಕ್ಸ್‌ಪ್ರೆಸ್ 16ಕ್ಕೆ, ಯಶವಂತಪುರ– ಬಾರ್ಮೆರ್ 19ರಂದು ರದ್ದಾಗಿದೆ.

ಗಾಂಧಿಧಾಮ– ಬೆಂಗಳೂರು ಎಕ್ಸ್‌ಪ್ರೆಸ್ 13ಕ್ಕೆ, ಜೋಧಪುರ–ಬೆಂಗಳೂರು 15ಕ್ಕೆ, ಬೆಂಗಳೂರು–ಜೋಧಪುರ 15ಕ್ಕೆ, ಮೈಸೂರು– ಅಜ್ಮೀರ್ ಎಕ್ಸ್‌ಪ್ರೆಸ್ 13ಕ್ಕೆ, ಅಜ್ಮೀರ್– ಮೈಸೂರು ಎಕ್ಸ್‌ಪ್ರೆಸ್ 16ಕ್ಕೆ, ಬೆಂಗಳೂರು–ಜೋಧಪುರ 11ಕ್ಕೆ, ಜೋಧಪುರ–ಬೆಂಗಳೂರು 14ಕ್ಕೆ, ದೆಹಲಿ ಸರೈ ರೊಹಿಲಾ–ಯಶವಂತಪುರ 12ಕ್ಕೆ, ಮೀರಜ್‌–ಹುಬ್ಬಳ್ಳಿ–ಮೀರಜ್ ಪ್ಯಾಸೆಂಜರ್ 12ರಿಂದ 22, ಹುಬ್ಬಳ್ಳಿ–ಬೆಳಗಾವಿ ಪ್ಯಾಸೆಂಜರ್ 12ರಿಂದ 22, ವಿಜಯಪುರ– ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಫಾಸ್ಟ್ ಪ್ಯಾಸೆಂಜರ್ ರೈಲನ್ನು 12ರಂದು ರದ್ದುಗೊಳಿಸಲಾಗಿದೆ.

ಹಾಸನ–ಸುಬ್ರಹ್ಮಣ್ಯ ನಡುವಿನ ಮಾರ್ಗದಲ್ಲಿ 30ಕ್ಕೂ ಹೆಚ್ಚು ಕಡೆ ಭೂಕುಸಿತ, ಬಂಡೆ ಉರುಳಿ ಬಿದ್ದಿದ್ದು, ಈ ಮಾರ್ಗದಲ್ಲಿ ಆ. 23ರವರೆಗೂ ರೈಲು ಸಂಚಾರ ರದ್ದುಗೊಳಿಸಲಾಗಿದೆ.

ಯಶವಂತಪುರ–ಕಾರವಾರ, ಬೆಂಗಳೂರು–ಕಣ್ಣೂರು–ಕಾರವಾರ, ಯಶವಂತಪುರ–ಮಂಗಳೂರು ಎಕ್ಸ್‌ಪ್ರೆಸ್‌ ರೈಲು ಸಂಚಾರ ರದ್ದುಗೊಂಡಿದೆ.

Post Comments (+)