7

ಕೊಡಗಿನಲ್ಲಿ ಮುಂದುವರಿದ ಮಳೆ

Published:
Updated:

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರಿದಿದೆ. ಶನಿವಾರದಷ್ಟು ಅಬ್ಬರ ಇಲ್ಲದಿದ್ದರೂ ಬಿಡುವು ನೀಡುತ್ತಾ ಮಳೆ ಸುರಿಯುತ್ತಿದೆ. ಭಾಗಮಂಡಲದಲ್ಲಿ ಪ್ರವಾಹ ಸ್ಥಿತಿ ಹಾಗೆಯೇ ಇದೆ‌‌. ಹಾರಂಗಿ ಜಲಾಶಯದ ಹೊರ ಹರಿವು ಹೆಚ್ಚಿಸಲಾಗಿದೆ. 

ಶನಿವಾರ ದಿನವಿಡೀ ಸುರಿದ ಧಾರಾಕಾರ ಮಳೆಯಿಂದ ಸಂಜೆ 4 ಗಂಟೆ ವೇಳೆಗೆ ಒಳಹರಿವು ದಿಢೀರ್ 24,300 ಕ್ಯುಸೆಕ್‌ಗೆ ಏರಿಕೆಯಾಗಿತ್ತು. ರಾತ್ರಿ ಮಳೆಯ ತೀವ್ರತೆ ಕಡಿಮೆಯಾದ ಪರಿಣಾಮ 18,000 ಕ್ಯುಸೆಕ್ ಇಳಿದಿತ್ತು. 

ಭಾನುವಾರ ಬೆಳಿಗ್ಗೆ 6 ಗಂಟೆಗೆ 13,354 ಕ್ಯುಸೆಕ್ ಒಳಹರಿವು ಇದೆ. ನದಿಗೆ 1,500 ಹಾಗೂ ಕಾಲುವೆಗೆ 175 ಕ್ಯುಸೆಕ್‌ ನೀರು‌ ಹರಿಸಲಾಗುತ್ತಿದೆ. ಶನಿವಾರ ಸಂಜೆ 1,200 ಕ್ಯುಸೆಕ್ ಹೊರ ಹರಿವು ಇತ್ತು.

ಜಿಲ್ಲೆಯಲ್ಲಿ ನದಿ ಹಾಗೂ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.

ಹಾರಂಗಿ ಜಲಾಶಯದ ಮಟ್ಟ - ಕೊಡಗು 
ಗರಿಷ್ಠ ಮಟ್ಟ 2,859 ಅಡಿ
ಇಂದಿನ ಮಟ್ಟ 2,856.73 ಅಡಿ
ಒಳ ಹರಿವು 13,354 ಕ್ಯುಸೆಕ್ 
ಹೊರ ಹರಿವು 1,675 ಕ್ಯುಸೆಕ್ 
(ನದಿಗೆ 1,500 ಕ್ಯುಸೆಕ್, ಕಾಲುವೆಗೆ 175 ಕ್ಯುಸೆಕ್)

ಬರಹ ಇಷ್ಟವಾಯಿತೆ?

 • 21

  Happy
 • 2

  Amused
 • 0

  Sad
 • 2

  Frustrated
 • 2

  Angry

Comments:

0 comments

Write the first review for this !