ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ವಿವಿಧೆಡೆ ತಂಪೆರೆದ ಮಳೆ

ಚಿಕ್ಕಬಳ್ಳಾಪುರ: ಆಲಿಕಲ್ಲು ಮಳೆಗೆ ದ್ರಾಕ್ಷಿ, ಮಾವು ಬೆಳೆ ಹಾನಿ
Last Updated 20 ಮಾರ್ಚ್ 2020, 23:13 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಸೇರಿದಂತೆ ಹಲವೆಡೆ ಶುಕ್ರವಾರ ಮಳೆ ಸುರಿಯಿತು. ಇದರಿಂದಾಗಿ ಇಳೆ ತಂಪಾಯಿತು.

ಚಿಕ್ಕಬಳ್ಳಾಪುರ  ತಾಲ್ಲೂಕಿನ ದಿಬ್ಬೂರು, ಗಂಗರೇಕಾಲುವೆ, ಅಂಗರೇಖನಹಳ್ಳಿ, ಚಿಮನಹಳ್ಳಿ, ಪಾತೂರು, ಹಿರಿಯಣ್ಣಹಳ್ಳಿ, ಕಂಡಕನಹಳ್ಳಿ, ದೊಡ್ಡಪೈಲಗುರ್ಕಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿಆಲಿಕಲ್ಲು ಮಳೆ ಸುರಿಯಿತು. ದ್ರಾಕ್ಷಿ, ಮಾವಿಗೆ ಹಾನಿಯಾಗಿದೆ.

ಕೋಲಾರ ನಗರ ಮತ್ತು ಜಿಲ್ಲೆಯ ಮಾಲೂರು ಪಟ್ಟಣ, ಶ್ರೀನಿವಾಸಪುರ, ಮಾಲೂರು, ಬಂಗಾರಪೇಟೆ ತಾಲ್ಲೂಕಿನಲ್ಲಿ ಮಳೆಯಾಗಿದೆ. ಬೇತಮಂಗಲದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ.

ತುಮಕೂರು ಜಿಲ್ಲೆಯ ಗುಬ್ಬಿ, ನಿಟ್ಟೂರು, ಎಂ.ಎನ್.ಕೋಟೆ, ಕಡಬ, ಕೆ.ಜಿ.ಟೆಂಪಲ್ ಭಾಗಗಳಲ್ಲಿ ಮಳೆಗೆ ಮಾವಿನಕಾಯಿ ಉದುರಿವೆ.

ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಹಂಪಾಪುರ, ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿ, ಚಾಮರಾಜನಗರದ ಪಟ್ಟಣ, ತಾಲ್ಲೂಕಿನ ವಿವಿಧೆಡೆ, ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿ ಸಾಧಾರಣ ಮಳೆಯಾಗಿದೆ.

ಮೇಲ್ಸೇತುವೆ ಮೇಲೆ ಹರಿದ ನೀರು: ಬೆಂಗಳೂರು ನಗರದಲ್ಲಿ ಶುಕ್ರವಾರ ಸಂಪಂಗಿರಾಮನಗರ, ಶಾಂತಿನಗರ, ಗಾಂಧಿನಗರ, ಮಹಾತ್ಮ ಗಾಂಧಿ ರಸ್ತೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಸಾಧಾರಣ, ಬಳ್ಳಾರಿ ರಸ್ತೆ ಪ್ರದೇಶಗಳಲ್ಲಿ ಜೋರು ಮಳೆಯಾಯಿತು.ಬ್ಯಾಟರಾಯನಪುರ ಮೇಲ್ಸೇತುವೆಯಲ್ಲಿ ನೀರು ಹರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT