ಶನಿವಾರ, ಆಗಸ್ಟ್ 17, 2019
24 °C

ಮುಂಗಾರು ವಾಡಿಕೆಗಿಂತ ಕಡಿಮೆ ಮಳೆ

Published:
Updated:
Prajavani

ನವದೆಹಲಿ: ಈ ಬಾರಿಉತ್ತರ ಮತ್ತು ದಕ್ಷಿಣ ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಂಭವ ಇದೆ ಎಂದು ಭಾರತದ ಹವಾಮಾನ ಇಲಾಖೆ ಶುಕ್ರವಾರ ಹೇಳಿದೆ.

ಮುಂಗಾರು ಮಳೆಯ ಮೇಲೆ ಎಲ್‌ ನಿನೊ ಚಂಡಮಾರುತದ ಪರಿಣಾಮ ಈ ಸಲವೂ ಮುಂದುವರಿಯಲಿದೆ. ಆದರೆ ಮಳೆಗಾಲದ ಕೊನೆ ಅವಧಿಯಲ್ಲಿ ಇದರ ಪ್ರಭಾವ ಕಡಿಮೆಯಾಗಲಿದೆ. 

ಜುಲೈನಲ್ಲಿ ವಾಡಿಕೆಗಿಂತ ಕಡಿಮೆ ಮತ್ತು ಆಗಸ್ಟ್‌ ತಿಂಗಳಿನಲ್ಲಿ ವಾಡಿಕೆ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

Post Comments (+)