ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಮಳೆ ಹಿನ್ನೆಲೆ ಬೆಳಗಾವಿ, ಕೊಡಗು ಜಿಲ್ಲೆಯಲ್ಲಿ ‘ರೆಡ್ ಅಲರ್ಟ್’ ಘೋಷಣೆ

Last Updated 6 ಸೆಪ್ಟೆಂಬರ್ 2019, 1:01 IST
ಅಕ್ಷರ ಗಾತ್ರ

ಬೆಂಗಳೂರು: ಭಾರಿ ಮಳೆ ಹಿನ್ನೆಲೆಯಲ್ಲಿ ಬೆಳಗಾವಿ, ಕೊಡಗು ಜಿಲ್ಲೆ ಹಾಗೂ ಲಿಂಗನಮಕ್ಕಿ ನದಿ ಪಾತ್ರದಲ್ಲಿ ‘ರೆಡ್ ಅಲರ್ಟ್’ ಘೋಷಿಸಲಾಗಿದೆ.

‘ಎನ್‌ಡಿಆರ್‌ಎಫ್ ತಂಡ ಈಗಾಗಲೇ ಬೆಳಗಾವಿಗೆ ಬಂದಿದ್ದು, ರಕ್ಷಣೆಗೆ ಸಿದ್ಧತೆ ಮಾಡಿಕೊಂಡಿದೆ. ಪರಿಹಾರದ ಸಲುವಾಗಿ ಬೆಳಗಾವಿಗೆ ₹30 ಕೋಟಿ, ಶಿವಮೊಗ್ಗಕ್ಕೆ ₹10 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದು ಕಂದಾಯ ಸಚಿವ ಆರ್. ಅಶೋಕ ಗುರುವಾರ ತಿಳಿಸಿದರು.

‘ನಿರಾಶ್ರಿತರಿಗೆ ಮನೆ ನಿರ್ಮಿಸುವ ಸ್ಥಳಗಳಲ್ಲೇ ತಾತ್ಕಾಲಿಕ ಶೆಡ್‌ ನಿರ್ಮಿಸಲಾಗುವುದು. ಹಿಂದಿನ ಸಂದರ್ಭಗಳಲ್ಲಿ ತೀರ ಚಿಕ್ಕದಾದ ಸ್ಥಳದಲ್ಲಿ ಮನೆಗಳನ್ನು ಕಟ್ಟಿಕೊಟ್ಟಿದ್ದು, ಇಂತಹ ಮನೆಗಳಿಗೆ ಜನರು ಹೋಗುತ್ತಿರಲಿಲ್ಲ. ಆದರೆ ಈ ಸಲ 30X30 ಅಥವಾ 30X40 ಅಳತೆಯ ನಿವೇಶನದಲ್ಲಿ ಮನೆ ನಿರ್ಮಿಸಲಾಗುವುದು. ನೆರೆಗೆ ತುತ್ತಾದ ಜನರು ಆಶ್ರಯ ಪಡೆದಿರುವ ಕೇಂದ್ರಗಳನ್ನು ‘ಕಾಳಜಿ ಕೇಂದ್ರ’ಗಳು ಎಂದೇ ಕರೆಯುವಂತೆ ಆದೇಶ ಹೊರಡಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT