ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಗಾಳಿ ಸಹಿತ ಭಾರೀ ಮಳೆ, ಹಲವೆಡೆ ಮತದಾನಕ್ಕೆ ಅಡ್ಡಿ

Last Updated 23 ಏಪ್ರಿಲ್ 2019, 10:53 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನಲ್ಲಿ ಗುಡುಗು-ಮಿಂಚು, ಗಾಳಿ ಸಹಿತ ಮಳೆ ಸುರಿಯುತ್ತಿದ್ದು, ಮತದಾನಕ್ಕೆ ಅಡ್ಡಿಯಾಗಿದೆ.

ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 1 ಗಂಟೆಯ ವೇಳೆಗೆ ಶೇ 40.35 ಮತದಾನವಾಗಿತ್ತು. ಮತದಾರರು ತುರುಸಿನಿಂದ ಮತಚಲಾಯಿಸುತ್ತಿದ್ದರು.

ಈಗ ಭಾರೀ ಗಾಳಿಯೊಂದಿಗೆ ಮಳೆ ಸುರಿಯುತ್ತಿರುವುದರಿಂದ ಜನರು ಮತಗಟ್ಟೆಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

ದಾವಣಗೆರೆ: ತಾಲ್ಲೂಕಿನ ಹದಡಿ ಗ್ರಾಮದಲ್ಲಿ ಕೆಲ ಕ್ಷಣ ತುಂತುರು ಮಳೆಯಾಗಿದೆ. ಮೋಡ ಕವಿದ ವಾತಾವರಣವಿದ್ದು, ಸಂಜೆಯ ವೇಳೆಗೆ ಮಳೆ ಬರುವ ಸಾಧ್ಯತೆ ಇದೆ.

ಮುಂಡಗೋಡ: ಗಾಳಿ ಸಹಿತ ಮಳೆ
ಮುಂಡಗೋಡಪಟ್ಟಣದಲ್ಲಿ ಅರ್ಧ ಗಂಟೆ ಕಾಲ ಗಾಳಿ ಸಹಿತ ಮಳೆಯಾಗಿದೆ. ಇನ್ನೂ ತುಂತುರು ಹನಿ ಮುಂದಿವರಿದಿದೆ.

ಬಸ್ ನಿಲ್ದಾಣ ಸನಿಹ ಮರವೊಂದು ಉರುಳಿದೆ. ಮರದ ಕೆಳಗೆ ಕುಳಿತಿದ್ದ ಪಕ್ಷದ ಕಾರ್ಯಕರ್ತರು ಸ್ವಲ್ಪದರಲ್ಲಿಯೇ ಪಾರಾಗಿದ್ದಾರೆ. ಕೆಲವು ಮತಗಟ್ಟೆ ಗಳ ಆವರಣದ ಒಳಗೆ ಗಟಾರ ನೀರು ಹರಿದಿದೆ. ಸಣ್ಣ ಪ್ರಮಾಣದಲ್ಲಿ ಆಲಿಕಲ್ಲು ಸಹ ಬಿದ್ದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT