ವಿವಿಧೆಡೆ ಆಲಿಕಲ್ಲು ಮಳೆ

7

ವಿವಿಧೆಡೆ ಆಲಿಕಲ್ಲು ಮಳೆ

Published:
Updated:

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಭಾನುವಾರ ಮಳೆಯಾಗಿದೆ. ಚಿಕ್ಕಮಗಳೂರು ನಗರದಲ್ಲಿ ಅರ್ಧ ಗಂಟೆಗೂ ಹೆಚ್ಚು ಸಮಯ ತುಸು ಬಿರುಸಿನ ಮಳೆ ಸುರಿಯಿತು.

ಸಂಜೆ ವೇಳೆ ಸುಮಾರು ಮುಕ್ಕಾಲು ಗಂಟೆ ತುಂತುರು ಹನಿಗಳ ಸಿಂಚನವಾಯಿತು. ರಾತ್ರಿ 7 ಗಂಟೆಗೆ ರಭಸವಾಗಿ ಸುರಿಯಿತು. ಬೀರೂರಿನಲ್ಲಿ ಸಂಜೆ ಒಂದು ಗಂಟೆ ಮಳೆ ಸುರಿಯಿತು.

ಮೈಸೂರು ಜಿಲ್ಲೆಯಾದ್ಯಂತ ಗುಡುಗು, ಸಿಡಿಲಿನಿಂದ ಕೂಡಿದ ಮಳೆಯಾಗಿದೆ.‌

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ‌ಕಸಬಾ ಹೋಬಳಿಯ ಇಡಗೂರು ಸುತ್ತಮುತ್ತ ತುಂತುರು ಮಳೆ ಸುರಿದಿದೆ. ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣ ಹಾಗೂ ತಾಲ್ಲೂಕಿನ ಚನ್ನರಾಯನದುರ್ಗ, ಹೊಳವನಹಳ್ಳಿ, ಕಸಬಾ ಮತ್ತು ಕೋಳಾಲ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆ ಬಿದ್ದಿದೆ. ಸಣ್ಣ ಪುಟ್ಟ ಗುಂಡಿಗಳಲ್ಲಿ ನೀರು ತುಂಬಿದೆ.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ವಿವಿಧೆಡೆ ಗುಡುಗು, ಸಿಡಿಲು ಸಹಿತ ಅಕಾಲಿಕ ಮಳೆ ಬಂದಿದೆ.

ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನಲ್ಲಿ ಕೂಡ ಮಳೆ ಸುರಿದಿದೆ.

ಹವಾಮಾನ ವರದಿ: ಅರಬ್ಬಿ ಸಮುದ್ರದಿಂದ ತೆಲಂಗಾಣದವರೆಗೂ (ಟ್ರಫ್‌) ವಾಯುಭಾರ ಏರಿಕೆ ಕಂಡಿದ್ದರಿಂದ ರಾಜ್ಯದಲ್ಲಿ ಸೋಮವಾರ ಮಳೆಯಾಗುವ ಸಾಧ್ಯತೆ ತೀರ ಕಡಿಮೆ ಇದೆ ಹವಾಮಾನ ಇಲಾಖೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !