ರಾಜಭವನ ವೀಕ್ಷಿಸಿದ 25 ಸಾವಿರ ಮಂದಿ

7

ರಾಜಭವನ ವೀಕ್ಷಿಸಿದ 25 ಸಾವಿರ ಮಂದಿ

Published:
Updated:

ಬೆಂಗಳೂರು: ರಾಜಭವನವನ್ನು ಆಗಸ್ಟ್ 23ರಿಂದ ಸೆಪ್ಟೆಂಬರ್ 6ರವರೆಗೆ ಸುಮಾರು 25 ಸಾವಿರ ಮಂದಿ ವೀಕ್ಷಿಸಿದ್ದಾರೆ.

ಜಾಲತಾಣದಲ್ಲಿ ನೋಂದಣಿ ಮಾಡಿಸಿಕೊಂಡಿದ್ದ ಸಾರ್ವಜನಿಕರು, ಕುಟುಂಬ ಸಮೇತರಾಗಿ ಹೋಗಿ ರಾಜಭವನದ ವೈಭವ ಕಣ್ತುಂಬಿಕೊಂಡಿದ್ದಾರೆ. ಸಾರ್ವಜನಿಕರ ವೀಕ್ಷಣೆಗೆ ಗುರುವಾರ ಕೊನೆಯ ದಿನವಾಗಿದ್ದರಿಂದ, ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ದರು.

ರಾಜಭವನದ ಉದ್ಯಾನ, ಐತಿಹಾಸಿಕ ಕಟ್ಟಡ, ಕಲಾಕೃತಿಗಳನ್ನು ಜನ ವೀಕ್ಷಿಸಿದರು. ದೀಪಾಲಂಕಾರ ಗಮನಸೆಳೆಯಿತು. ರಾಜಭವನದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸಾಕ್ಷ್ಯಚಿತ್ರವನ್ನೂ ವೀಕ್ಷಿಸಿದರು. 

ಭೇಟಿ ನೀಡಿದ್ದ ಪ್ರತಿಯೊಬ್ಬರಿಗೂ ಉಚಿತವಾಗಿ ಫೋಟೊ ತೆಗೆದುಕೊಡಲು ಛಾಯಾಗ್ರಾಹಕರನ್ನು ನೇಮಕ ಮಾಡಿದ್ದು ಹಾಗೂ ತಿಂಡಿ–ತಿನಿಸು ವ್ಯವಸ್ಥೆ ಕಲ್ಪಿಸಿದ್ದು ವಿಶೇಷವಾಗಿತ್ತು.

‘ನಿಗದಿತ ಕಾಲಾವಧಿ ಮುಕ್ತಾಯವಾಗಿದ್ದರಿಂದ, ಪ್ರವೇಶವನ್ನು ಸದ್ಯಕ್ಕೆ ಬಂದ್‌ ಮಾಡಿದ್ದೇವೆ. ದಿನ ವಿಸ್ತರಣೆ ಮಾಡುವಂತೆ ಹಲವರು ಒತ್ತಾಯಿಸುತ್ತಿದ್ದು, ಆ ಬಗ್ಗೆ ಕೆಲವು ದಿನಗಳ ನಂತರ ತೀರ್ಮಾನ ಕೈಗೊಳ್ಳಲಿದ್ದೇವೆ’ ಎಂದು ರಾಜಭವನ ಅಧಿಕಾರಿಯೊಬ್ಬರು ತಿಳಿಸಿದರು.

‘ಬಿಬಿಎಂಪಿ, ಪೊಲೀಸ್ ಇಲಾಖೆ, ಪ್ರವಾಸೋದ್ಯಮ, ತೋಟಗಾರಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಕಾರದಿಂದ ಭೇಟಿ ಕಾರ್ಯಕ್ರಮವು ಯಶಸ್ವಿಯಾಗಿದೆ’ ಎಂದು ನೆನೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !