ಮಂತ್ರಾಲಯ: ರಾಜಕುಮಾರ್‌ ಭವನ ನವೀಕರಣ

7

ಮಂತ್ರಾಲಯ: ರಾಜಕುಮಾರ್‌ ಭವನ ನವೀಕರಣ

Published:
Updated:
Prajavani

ರಾಯಚೂರು: ಮಂತ್ರಾಲಯದಲ್ಲಿರುವ ‘ರಾಜಕುಮಾರ್‌ ಭವನ’ವು ನವೀಕರಣಗೊಂಡಿದ್ದು, ಶೀಘ್ರದಲ್ಲೇ ವಾಸ್ತವ್ಯಕ್ಕೆ ಲಭ್ಯವಾಗಿದೆ.

ಎಪ್ಪತ್ತರ ದಶಕದಲ್ಲಿ ಡಾ.ರಾಜಕುಮಾರ್‌ ಅವರು ತಮ್ಮದೇ ಹೆಸರಿನಲ್ಲಿ ಈ ಭವನವನ್ನು ನಿರ್ಮಿಸಿದ್ದರು. ಕಟ್ಟಡವು ಶಿಥಿಲಗೊಂಡಿತ್ತು. ರಾಜಕುಮಾರ್‌ ಅವರ ಪುತ್ರರು ಭವನವನ್ನು ನವೀಕರಿಸಿದ್ದಾರೆ.

ಗುರುವಾರ ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಪುನೀತ್‌ ರಾಜಕುಮಾರ್‌ ಈ ವಿಷಯವನ್ನು ತಿಳಿಸಿದರು.

‘ನಟಸಾರ್ವಭೌಮ ಚಿತ್ರವು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ’ ಎಂದ ಅವರು, ‘ಐಟಿ ದಾಳಿ ಮುಗಿದು ಹೋಗಿರುವ ವಿಷಯ’ ಎಂದು ಹೇಳಿದರು.

ಫೆಬ್ರುವರಿಯಲ್ಲಿ ಸುಜಯೀಂದ್ರ ತೀರ್ಥರ ಜನ್ಮಶತಮಾನೋತ್ಸವ ಕಾರ್ಯಕ್ರಮವಿದ್ದು, ಭಾಗವಹಿಸುವಂತೆ ಪೀಠದ ಸ್ವಾಮಿಗಳು ಆಹ್ವಾನ ನೀಡಿರುವುದಾಗಿಯೂ ಹೇಳಿದರು.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 2

  Frustrated
 • 1

  Angry

Comments:

0 comments

Write the first review for this !