ಪೊಲೀಸರ ರಕ್ಷಣೆ ಕೋರಿದ ರಾಜು– ರುಬಿಯಾ ದಂಪತಿ

ಬುಧವಾರ, ಮಾರ್ಚ್ 27, 2019
22 °C

ಪೊಲೀಸರ ರಕ್ಷಣೆ ಕೋರಿದ ರಾಜು– ರುಬಿಯಾ ದಂಪತಿ

Published:
Updated:
Prajavani

ಶೃಂಗೇರಿ: ಪರಸ್ಪರ ಪ್ರೀತಿಸಿ, ಊರು ತೊರೆದು ಬಂದು ವಿವಾಹವಾಗಿರುವ ವಿಜಯಪುರದ ದಂಪತಿಯು ರಕ್ಷಣೆ ಕೋರಿ ಶೃಂಗೇರಿ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾರೆ.

ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ನೇಕಾರಬೀದಿಯ ರುಬಿಯಾ ಹಾಗೂ ಅದೇ ಊರಿನ ರಾಜು ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. 2018ರಲ್ಲಿ ಶೃಂಗೇರಿ ತಾಲ್ಲೂಕಿನ ಬೆಳಂದೂರು ಗ್ರಾಮದ ಓಂಕಾರೇಶ್ವರ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ರುಬಿಯಾ ಮಗುವಿಗೆ ಜನ್ಮ ನೀಡಿದ್ದಾರೆ.

‌ವಿವಾಹಕ್ಕೆ ಎರಡೂ ಕುಟುಂಬಗಳ ಪೋಷಕರ ವಿರೋಧವಿದ್ದ ಕಾರಣ ಊರನ್ನೇ ತೊರೆದು ಶೃಂಗೇರಿಯಲ್ಲೇ ವಾಸಿಸುತ್ತಿದ್ದರು. ಮಗಳನ್ನು ಬಲವಂತವಾಗಿ ಕರೆದೊಯ್ಯಲಾಗಿದೆ ಎಂದು ರುಬಿಯಾ ಪೋಷಕರು ಇದೀಗ ಚಡಚಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

‘ರುಬಿಯಾ ತನ್ನ ಹೆಸರನ್ನು ಪ್ರೀತಿ ಎಂದು ಬದಲಾಯಿಸಿಕೊಂಡಿದ್ದಾರೆ. ತಾವು ವಯಸ್ಕರಾಗಿದ್ದು, ಸ್ವ ಇಚ್ಛೆಯಿಂದ ವಿವಾಹವಾಗಿದ್ದೇವೆ. ಬೇರೆ ಬೇರೆ ಧರ್ಮಕ್ಕೆ ಸೇರಿದ ಕಾರಣ ಜೀವ ಬೆದರಿಕೆ ಇದೆ. ನಮಗೆ ರಕ್ಷಣೆ ನೀಡಬೇಕು’ ಎಂದು ಪೊಲೀಸರಲ್ಲಿ ರಾಜು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !