ಸೋಮವಾರ, ಅಕ್ಟೋಬರ್ 14, 2019
24 °C

ಮಡಿಕೇರಿಯಲ್ಲಿ ಸೇನಾ ನೇಮಕಾತಿ ರ‍್ಯಾಲಿ

Published:
Updated:

ಮಡಿಕೇರಿ: ನಗರದ ಜನರಲ್‌ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಇದೇ 13ರಿಂದ 18ರ ತನಕ ವಿವಿಧ ಹುದ್ದೆಗಳಿಗೆ ಸೇನಾ ನೇಮಕಾತಿ ರ‍್ಯಾಲಿ ನಡೆಯಲಿದೆ. ಅದಕ್ಕೆ ಜಿಲ್ಲಾ ಕ್ರೀಡಾಂಗಣ ಸಜ್ಜಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಹಾಗೂ ಚಿತ್ರದುರ್ಗ ಜಿಲ್ಲೆಯ ಯುವಕರು ಈ ರ‍್ಯಾಲಿಯಲ್ಲಿ ಪಾಲ್ಗೊಳ್ಳಬಹುದು.

ವೆಬ್‌ಸೈಟ್‌: www.joinindianarmy.gov.inನಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಂಡವರು ಮಾತ್ರ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಸೋಲ್ಜರ್‌ ಜನರಲ್‌ ಡ್ಯೂಟಿ, ಸೋಲ್ಜರ್‌ ಟೆಕ್ನಿಕಲ್‌, ಸೋಲ್ಜರ್‌ ಟ್ರೇಡ್ಸ್‌ಮನ್‌, ಸೋಲ್ಜರ್‌ ಕ್ಲರ್ಕ್‌, ಸ್ಟೋರ್ ಕೀಪರ್‌ ಟೆಕ್ನಿಕಲ್‌, ಸೋಲ್ಜರ್‌ ಟೆಕ್ನಿಕಲ್‌ ನರ್ಸಿಂಗ್‌ ಅಸ್ಟಿಟೆಂಟ್‌, ನರ್ಸಿಂಗ್‌ ಅಸ್ಟಿಟೆಂಟ್‌ ವೆಟನರಿ ಮತ್ತಿತರ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Post Comments (+)