ಗುರುವಾರ , ನವೆಂಬರ್ 21, 2019
26 °C

ಹಿರಿಯ ಯಕ್ಷಗಾನ ಕಲಾವಿದ ರಾಮಚಂದ್ರ ಗಾಂವ್ಕರ್ ನಿಧನ

Published:
Updated:

ಅಂಕೋಲಾ: ಹಿರಿಯ ಯಕ್ಷಗಾನ ಕಲಾವಿದ ತಾಲ್ಲೂಕಿನ ಕನಕನಹಳ್ಳಿ ದೂಪದಮನೆಯ ರಾಮಚಂದ್ರ ಗಾಂವ್ಕರ್ (87) ಶನಿವಾರ ನಿಧನರಾದರು. ಅವರಿಗೆ ಮೂವರು ಪುತ್ರರು, ಮೂವರು ಪುತ್ರಿಯರು ಇದ್ದಾರೆ. 

ಚಿಕ್ಕ ವಯಸ್ಸಿನಲ್ಲೇ ಯಕ್ಷಗಾನ ಅಭ್ಯಾಸ ಮಾಡಿದ್ದ ಅವರು, ಬೇರೆ ಬೇರೆ ರಾಜ್ಯಗಳಿಗೆ ಯಕ್ಷಗಾನ ಮೇಳ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.  ಇವರ ಮಕ್ಕಳೂ ಕೂಡ ಯಕ್ಷಗಾನ ಕಲಾವಿದರಾಗಿದ್ದು, ಯಕ್ಷಗಾನ ಪರಂಪರೆ‌ ಮುಂದುವರಿದಿದೆ. ಅವರ ಮೊಮ್ಮಗ ಗಣೇಶ ಗಾಂವ್ಕರ್ ಕನಕನಹಳ್ಳಿ ಪ್ರಸಿದ್ಧ ಚಂಡೆವಾದಕರು.  

'ಹಳೆಯ ತಲೆಮಾರಿನ, ಹಳೆಯ ಮಟ್ಟಿನ ಕೊನೆಯ ಕೊಂಡಿಯಂತಿದ್ದ ರಾಮಚಂದ್ರ ಗಾಂವ್ಕರ್ ಅವರು, ಮೊಮ್ಮಗನ ಚಂಡೆ ವಾದನವನ್ನು ಪ್ರತಿ ದಿನ ಆಲಿಸಿ ಸಂತಸಪಡುತ್ತಿದ್ದರು' ಎಂದು  ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ, ಸ್ಥಳೀಯ ನಿವಾಸಿ ಶಿವರಾಮ ಗಾಂವ್ಕರ ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)