‘ದೇವರು ಬಯಕೆ ಈಡೇರಿಸುವವರೆಗೆ ಸಚಿವ ಸಂಪುಟ ಸಭೆಗೆ ಹೋಗಲ್ಲ’

7

‘ದೇವರು ಬಯಕೆ ಈಡೇರಿಸುವವರೆಗೆ ಸಚಿವ ಸಂಪುಟ ಸಭೆಗೆ ಹೋಗಲ್ಲ’

Published:
Updated:
Deccan Herald

ಬೆಳಗಾವಿ: ‘ದೇವರಲ್ಲಿ ಏನೋ ಕೇಳಿಕೊಂಡಿದ್ದೇನೆ. ಅದು ಈಡೇರುವವರೆಗೂ ಸಚಿವ ಸಂಪುಟದ ಸಭೆಗೆ ಹೋಗುವುದಿಲ್ಲ. ಸರ್ಕಾರದ ಕಾರನ್ನು ಕೂಡ ಬಳಸುವುದಿಲ್ಲ’ ಎಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈಗಾಗಲೇ 5 ಸಚಿವ ಸಂಪುಟ ಸಭೆಗಳಿಗೆ ಗೈರಾಗಿದ್ದೇನೆ. ಮುಂದೆ ನಡೆಯಲಿರುವ ಸಭೆಗೂ ಹಾಜರಾಗುವುದಿಲ್ಲ. ನನ್ನ ಕೋರಿಕೆ ಈಡೇರುವವರೆಗೂ ಹೋಗುವುದಿಲ್ಲ. ಏನು ಬೇಡಿಕೊಂಡಿದ್ದೇನೆ ಎಂಬುದನ್ನು ಮಾಧ್ಯಮಗಳ ಮುಂದೆ ಹೇಳುವುದಿಲ್ಲ’ ಎಂದರು.

‘ನಾನು ದೇವರನ್ನು ನಂಬುತ್ತೇನೆ. ಸಚಿವ ಸ್ಥಾನಕ್ಕಿಂತ ಧಾರ್ಮಿಕ ನಂಬಿಕೆಗೆ ಹೆಚ್ಚು ಮಹತ್ವ ನೀಡುತ್ತೇನೆ. ಖಾತೆಯ ಬಗ್ಗೆ ಯಾವುದೇ ಅಸಮಾಧಾನವಿಲ್ಲ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !