ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಕ್ಕೆ ಹಾರಲಿದ್ದಾರೆಯೇ ರಮೇಶ ಜಾರಕಿಹೊಳಿ ?

Last Updated 29 ಏಪ್ರಿಲ್ 2019, 14:55 IST
ಅಕ್ಷರ ಗಾತ್ರ

ಬೆಳಗಾವಿ: ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿರುವ ಶಾಸಕ ರಮೇಶ ಜಾರಕಿಹೊಳಿ ಸದ್ಯದಲ್ಲಿಯೇ ವಿದೇಶಕ್ಕೆ ಹಾರಲಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿ ಹರಡಿದೆ.

ಮುಂದಿನ ವಾರ ಯುರೋಪ್‌ ದೇಶಗಳಿಗೆ ಪ್ರವಾಸಕ್ಕೆ ಹೊರಡಲಿದ್ದಾರೆ. 15 ಅಥವಾ 30 ದಿನಗಳ ಪ್ಯಾಕೇಜ್‌ ಟೂರ್‌ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅವರು ಕುಟುಂಬ ಸದಸ್ಯರ ಜೊತೆ ಹೋಗುತ್ತಾರೆಯೇ ಅಥವಾ ಪಕ್ಷದ ಇತರ ಅತೃಪ್ತ ಶಾಸಕರ ಜೊತೆ ಹೋಗುತ್ತಾರೆಯೇ ಎನ್ನುವುದು ಬಹಿರಂಗಗೊಂಡಿಲ್ಲ.

ರಮೇಶ ಅವರು ಯಾವುದೇ ವಿದೇಶಕ್ಕೆ ಪ್ರವಾಸ ಹೊರಡುತ್ತಿಲ್ಲ ಎಂದು ಗೋಕಾಕದಲ್ಲಿರುವ ಶಾಸಕರ ಕಚೇರಿಯ ಸಿಬ್ಬಂದಿ ತಿಳಿಸಿದ್ದಾರೆ. ರಮೇಶ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT