ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾರವೇ ಇಲ್ಲದ ಪಕೋಡ

Last Updated 16 ಜೂನ್ 2018, 10:12 IST
ಅಕ್ಷರ ಗಾತ್ರ

ಪರೀಕ್ಷೆ ಮುಗಿಸಿ ರಜೆ ಸಿಕ್ಕಿದ್ದರಿಂದ ನಾನು ನನ್ನ ಅಕ್ಕನ ಮನೆಗೆ ಹೋಗಿದ್ದೆ. ನಾನಾಗ 10ನೇ ತರಗತಿ. ನನಗೆ ಆಗ ಅಡುಗೆ ಬಗ್ಗೆ ಏನೂ ಗೊತ್ತಿರಲಿಲ್ಲ. ಅಮ್ಮ ಮಾಡಿದ ಅಡುಗೆಯನ್ನು ಬಾಯಿ ಚಪ್ಪರಿಸಿಕೊಂಡು ತಿಂದು ಅಷ್ಟೇ ಗೊತ್ತಿದ್ದಿದು. ಅಡುಗೆ ಬಗ್ಗೆ ಏನೂ ಐಡಿಯಾವೂ ಇರಲಿಲ್ಲ. ಅಕ್ಕನ ಮನೆಯಲ್ಲೂ ನಾನು ಅಡುಗೆ ಕೆಲಸಕ್ಕೆ ಸೇರುತ್ತಿರಲಿಲ್ಲ. ಒಂದು ಸಂಜೆ ಮಳೆ ಆರಂಭವಾಯಿತು. ಮಳೆ ಜೊತೆ ಚಳಿಯೂ ಆರಂಭವಾಯಿತು. ನನ್ನ ಭಾವನಿಗೆ ಮಳೆಗೆ ಏನಾದರೂ ಬಿಸಿಬಿಸಿಯಾಗಿ ತಿನ್ನಬೇಕು ಎಂದು ಆಸೆಯಾಯಿತು. ಅಕ್ಕನ ಹತ್ತಿರ ಹೇಳಿಕೊಂಡರು.

ಅಕ್ಕ ನನ್ನನ್ನು ಕರೆದು ‘ಅಡುಗೆ ಮನೆಯಲ್ಲಿ ಕಪಾಟಿನಲ್ಲಿ ಕಡಲೆಹಿಟ್ಟು, ಈರುಳ್ಳಿ ಎಲ್ಲಾ ಇದೆ. ಈ ದಿನ ನೀನೇ ಪಕೋಡ ಮಾಡು’ ಎಂದು ಹೇಳಿದಳು. ನಾನು ಅವಳು ಹೇಳಿದಂತೆ ಅಡುಗೆ ಮನೆಗೆ ಹೋಗಿ ಕಡಲೆಹಿಟ್ಟು, ಈರುಳ್ಳಿ ಚಿಕ್ಕದಾಗಿ ಕತ್ತರಿಸಿ, ಮಿಶ್ರ ಮಾಡಿದೆ. ನಂತರ ಬಾಣಲಿಗೆ ಎಣ್ಣೆ ಹಾಕಿ, ಪಕೋಡ ಕರಿದೆ. ಅಕ್ಕನನ್ನು ಕರೆದೆ. ಅಕ್ಕ ಒಳಬಂದು, ತಟ್ಟೆಗೆ ಪಕೋಡ ಹಾಕಿಕೊಂಡು ಭಾವನಿಗೆ ಕೊಟ್ಟು ಬಂದಳು. ಭಾವ ಪಕೋಡವನ್ನು ತಿಂದಿದ್ದೇ, ಹಾಗೇ ಮುಖ ಕಿವುಚಿಕೊಂಡು ಪಕೋಡವನ್ನು ಉಗುಳಿಯೇ ಬಿಟ್ಟರು.

ಆಗಲೇ ನನಗೆ ತಿಳಿದಿದ್ದು, ನಾನು ಪಕೋಡಕ್ಕೆ ಮೆಣಸಿನಕಾಯಿ, ಖಾರ, ಉಪ್ಪು ಏನೂ ಹಾಕಿರಲಿಲ್ಲ ಎಂದು. ಆಮೇಲೆ ಎಲ್ಲಾ ಪಕೋಡಗಳನ್ನು ನಾಯಿಗಳಿಗೆ ಹಂಚಿದೆ.

ಪವಿತ್ರಾ ವೆಂಕಟೇಶ್‌, ಮಂಜುನಾಥ ಬಡಾವಣೆ, ಟಿ.ಸಿ ಪಾಳ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT