ಗೋಕಾಕನಲ್ಲಿ ಪ್ರತ್ಯಕ್ಷರಾದ ರಮೇಶ ಜಾರಕಿಹೊಳಿ ?

7

ಗೋಕಾಕನಲ್ಲಿ ಪ್ರತ್ಯಕ್ಷರಾದ ರಮೇಶ ಜಾರಕಿಹೊಳಿ ?

Published:
Updated:

ಬೆಳಗಾವಿ: ಎಂಟು ದಿನಗಳಿಂದ ಕಣ್ಮರೆಯಾಗಿದ್ದ ಶಾಸಕ ರಮೇಶ ಜಾರಕಿಹೊಳಿ ಮಂಗಳವಾರ ರಾತ್ರಿ ಗೋಕಾಕದಲ್ಲಿರುವ ತಮ್ಮ ನಿವಾಸಕ್ಕೆ ವಾಪಸ್ಸಾಗಿದ್ದರು ಎಂದು ಮೂಲಗಳು ತಿಳಿಸಿವೆ.

ರಾತ್ರಿ 9 ಗಂಟೆ ಹೊತ್ತಿಗೆ ಕಾರಿನಲ್ಲಿ ತಮ್ಮ ಪುತ್ರ ಅಮರನಾಥ ಹಾಗೂ ಕುಟುಂಬ ಸದಸ್ಯರ ಜೊತೆ ಬಂದಿಳಿದ ರಮೇಶ ಅವರು, ರಾತ್ರಿ ಊಟ ಮಾಡಿ ಮಲಗಿಕೊಂಡರು. ಬುಧವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ತೆರಳಿದರು. ಬಹುಶಃ ಬೆಂಗಳೂರಿನತ್ತ ಹೋಗಿರಬಹುದು ಎಂದು ಮೂಲಗಳು ಹೇಳಿವೆ.

ನಾನು ಪಕ್ಷ ಬಿಡಲ್ಲ– ಸತೀಶ: ‘ರಮೇಶ ಕಾಂಗ್ರೆಸ್‌ಗೆ ರಾಜೀನಾಮೆ ನೀಡುವುದಿಲ್ಲ. ಹಾಗೊಂದು ವೇಳೆ ರಾಜೀನಾಮೆ ಕೊಟ್ಟರೆ ಅದಕ್ಕೂ ನಮಗೂ ಸಂಬಂಧವಿಲ್ಲ. ನಾವು ಪಕ್ಷದಲ್ಲಿಯೇ ಮುಂದುವರಿಯುತ್ತೇವೆ’ ಎಂದು ಸಹೋದರ, ಸಚಿವ ಸತೀಶ ಜಾರಕಿಹೊಳಿ ಗೋಕಾಕದಲ್ಲಿ ಸುದ್ದಿಗಾರರಿಗೆ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !