ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ ವಿಸ್ತರಣೆ: ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಸ್ವಾಗತ

Last Updated 14 ಏಪ್ರಿಲ್ 2020, 7:56 IST
ಅಕ್ಷರ ಗಾತ್ರ

ಬೆಳಗಾವಿ: ಎಲ್ಲೆಡೆ ಹರಡುತ್ತಿರುವ ಕೊರೊನಾ ವೈರಾಣು ಸೋಂಕು ನಿಯಂತ್ರಣಕ್ಕಾಗಿ ಪ್ರಧಾನಮಂತ್ರಿ ‌ನರೇಂದ್ರ‌ ಮೋದಿ ಅವರು ಲಾಕ್‌ಡೌನ್ ಅವಧಿಯನ್ನು ಮೇ ತಿಂಗಳ ಮೂರನೇ ತಾರೀಖಿನವರೆಗೆ‌ ವಿಸ್ತರಿಸಿರುವುದನ್ನು‌ ನಾನು‌ ಸ್ವಾಗತಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಸ್ವಾಗತಿಸಿದ್ದಾರೆ.

ವಿಶ್ವವ್ಯಾಪಿಯಾಗಿರುವ ಕೊರೊನಾ ವೈರಸ್ ಅನ್ನು ನಿರ್ಮೂಲನೆ ಮಾಡುವುದೇ ನಮ್ಮ ಆದ್ಯ ಧ್ಯೇಯವಾಗಬೇಕು. ಪ್ರಪಂಚದ ಬಹುದೊಡ್ಡ ದೇಶಗಳೇ ಇಂದು‌ ಈ ಕೋವಿಡ್ 19ನಿಂದ ತತ್ತರಿಸಿರುವಾಗ ನಾವು ಲಾಕ್ ಡೌನ್ ನಿಯಮಗಳನ್ನು‌ ಪಾಲಿಸಿ ಸೋಂಕು ಮುಕ್ತ ಸಮಾಜವನ್ನು ನಿರ್ಮಿಸಬೇಕಾಗಿದೆ ಎಂದಿದ್ದಾರೆ.

ಎಲ್ಲರೂ ಸಾಮಾಜಿಕ ‌ಅಂತರ ಕಾಯ್ದುಕೊಂಡು, ಮನೆಯಲ್ಲಿಯೇ ಇದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳೋಣ. ಬಡವರಿಗೆ, ಅಶಕ್ತರಿಗೆ ಸಹಾಯ ‌ಮಾಡೋಣ.‌ ಆರೋಗ್ಯ ಸೇತು ಮೊಬೈಲ್ ಆ್ಯಪ್‌ ಅನ್ನು ಡೌನ್ ಲೋಡ್ ಮಾಡಿಕೊಳ್ಳುವಂತೆ ಅರಿವು ಮೂಡಿಸೋಣ.‌ ಸೋಂಕು ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿರುವ ಕೊರೊನಾ ಯೋಧರನ್ನು ಮುಕ್ತಕಂಠದಿಂದ ಗೌರವಿಸೋಣ ಎಂದು ಹೇಳಿದ್ದಾರೆ.

ದಿನನಿತ್ಯದ ಜೀವನಕ್ಕೆ ಅವಶ್ಯವಾದ ‌ವಸ್ತುಗಳು ಸಿಗುವಂತೆ ನಮ್ಮ ಸರ್ಕಾರವು ಕ್ರಮ ವಹಿಸಿದೆ. ಜನರು ಆತಂಕಪಡುವ ಅಗತ್ಯವಿಲ್ಲ. ಸಾಮಾಜಿಕ ಅಂತರ ಕಾಪಾಡಿಕೊಂಡು‌ ಮನೆಯೊಳಗೆ ಇದ್ದು ಕೊರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟೋಣ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT