ನಿರ್ದೇಶಕರಿಗೆ ಹಣ ಮಂಜೂರು ಹೊಣೆ

7
ಸಚಿವಾಲಯದ ವಾಹನಗಳ ದುರಸ್ತಿ

ನಿರ್ದೇಶಕರಿಗೆ ಹಣ ಮಂಜೂರು ಹೊಣೆ

Published:
Updated:

ಬೆಂಗಳೂರು: ವಿಧಾನಸಭಾ ಸಚಿವಾಲಯದ ಕಾರ್ಯದರ್ಶಿ ಎಸ್‌. ಮೂರ್ತಿ ಅವರ ಆಡಳಿತಾತ್ಮಕ ಅಧಿಕಾರಗಳಿಗೆ ಕತ್ತರಿ ಪ್ರಯೋಗಿಸಿದ್ದ ವಿಧಾನಸಭಾಧ್ಯಕ್ಷ ಕೆ.ಆರ್‌. ರಮೇಶ್‌ ಕುಮಾರ್, ₹ 50 ಸಾವಿರದ ಒಳಗಿನ ವೆಚ್ಚಗಳಿಗೆ ಮಂಜೂರಾತಿ ನೀಡುವ ಅಧಿಕಾರವನ್ನು ಸಚಿವಾಲಯದ ನಿರ್ದೇಶಕರಿಗೆ ನೀಡಿದ್ದಾರೆ.

ವಾಹನಗಳ ದುರಸ್ತಿಗೆ ಎಲ್ಲ ದಾಖಲೆಗಳನ್ನು ನಿರ್ದೇಶಕರು ಪರಿಶೀಲನೆ ನಡೆಸಬೇಕು. ದುರಸ್ತಿ ಅಗತ್ಯವಿದ್ದರೆಕಾರ್ಯಾದೇಶ ನೀಡಬಹುದು. ₹ 50 ಸಾವಿರದೊಳಗಿನ ವೆಚ್ಚಕ್ಕೆ ಅವರ ನೀಡಬಹುದು.

ಸಚಿವಾಲಯದಲ್ಲಿ ಜರಗುವ ವಿವಿಧ ಸಮಿತಿಗಳ ಸಭೆಗಳು, ತರಬೇತಿಗಳು ಹಾಗೂ ಶಿಷ್ಟಾಚಾರಕ್ಕೆ ಸಂಬಂಧಿಸಿದ ವೆಚ್ಚಗಳು ₹ 50 ಸಾವಿರಕ್ಕಿಂತ ಕಡಿಮೆ ಇದ್ದರೆ ನಿರ್ದೇಶಕರೇ ಒಪ್ಪಿಗೆ ನೀಡಬಹುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !