ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Live| ಸ್ಪೀಕರ್ ಸ್ಥಾನಕ್ಕೆ ರಮೇಶ್‌ಕುಮಾರ್ ಕಪ್ಪುಚುಕ್ಕೆ– ಶಾಸಕ ರೇಣುಕಾಚಾರ್ಯ

Last Updated 26 ಆಗಸ್ಟ್ 2019, 4:51 IST
ಅಕ್ಷರ ಗಾತ್ರ

ರಾಜೀನಾಮೆ ಕೊಟ್ಟಿರುವ 13 ಶಾಸಕರು ಹಾಗೂ ವಿಪ್ ಉಲ್ಲಂಘನೆ ಆರೋಪಕ್ಕೆ ಗುರಿಯಾದ ಒಬ್ಬ ಶಾಸಕಅನರ್ಹಗೊಳ್ಳಲಿದ್ದಾರೆಯೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿದೆ. ಅದಕ್ಕೆ ಪುಷ್ಠಿ ನೀಡುವಂತೆ ಸ್ಪೀಕರ್‌ ರಮೇಶ್‌ ಕುಮಾರ್ ಅವರು ಭಾನುವಾರ ದಿಢೀರ್‌ ಪತ್ರಿಕಾಗೋಷ್ಠಿ ಕರೆದಿದ್ದಾರೆ. ಇದರ ಕ್ಷಣಕ್ಷಣ ಮಾಹಿತಿ ಇಲ್ಲಿದೆ..

12.55ಸ್ಪೀಕರ್ ಸ್ಥಾನಕ್ಕೆರಮೇಶ್‌ಕುಮಾರ್ ಕಪ್ಪುಚುಕ್ಕೆ

ರಮೇಶ್‌ಕುಮಾರ್ ಅವರೇ ನಿಮ್ಮ ಬಗ್ಗೆ ಜನರು ಇಟ್ಟಿದ್ದ ಗೌರವ ವಿಶ್ವಾಸ ಕಡಿಮೆಯಾಗಿದೆ. ನೀವು ಆ ಸ್ಥಾನಕ್ಕೆ ಕಪ್ಪುಚುಕ್ಕೆ. ಶಾಸಕರು ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟರೆ ಗೌರವದಿಂದ ಅಂಗೀಕರಿಸಬೇಕಿತ್ತು. ಆದರೆ ನೀವು ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧವಾಗಿ ಅನರ್ಹಗೊಳಿಸಿದ್ದೀರಿ. ಪ್ರಜಾತಂತ್ರ ವ್ಯವಸ್ಥೆ ಕಗ್ಗೊಲೆ ಮಾಡಿದ್ದೀರಿ-ರೇಣುಕಾಚಾರ್ಯ

12.47–ಸ್ಪೀಕರ್‌ ರಮೇಶ್‌ ಕುಮಾರ್ ತುರ್ತು ಸುದ್ದಿಗೋಷ್ಠಿ ಕುರಿತುಸುರೇಶ್‌ ಕುಮಾರ್‌ ವ್ಯಂಗ್ಯದ ಟ್ವೀಟ್‌

12.43–ಮಾನ್ಯ ಸಭಾಧ್ಯಕ್ಷರು ಎಲ್ಲ 14 ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆಯಡಿ ಅನರ್ಹಗೊಳಿಸಿ ಹೊರಡಿಸಿರುವ ಆದೇಶ ಪ್ರಜಾಪ್ರಭುತ್ವಕ್ಕೆ ಸಂದ ನೈಜ ಗೆಲುವು- ಸಿದ್ದರಾಮಯ್ಯ

12.32ಅನರ್ಹ ಮಾಡಿರುವುದು ನ್ಯಾಯಸಮ್ಮತವಲ್ಲ

ಶಾಸಕರು ಸ್ವ–ಇಚ್ಚೆಯಿಂದ ರಾಜೀನಾಮೆ ಕೊಟ್ಟಾಗ, ಅದನ್ನು ಸ್ವೀಕರಿಸಬೇಕಿತ್ತು. ರಾಜಕೀಯ ಒತ್ತಡಕ್ಕೆ ಮಣಿದು 14 ಶಾಸಕರನ್ನು ಅನರ್ಹಗೊಳಿಸಿರುವುದು ಸರಿಯಾದ ನಿರ್ಧಾರವಲ್ಲ. ಯಾವ ನ್ಯಾಯಾಲಯವೂ ಅಂಗೀಕರಿಸುವುದಿಲ್ಲ. ಕೋರ್ಟ್‌ನಲ್ಲಿ ಅವರಿಗೆ ಗೆಲುವ ದೊರೆಯುತ್ತದೆ. ನಾವು ಇದನ್ನು ಖಂಡಿಸುತ್ತೇವೆ. ಸರ್ಕಾರ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ರಾಜೀನಾಮೆ ನೀಡುವುದು ಶಾಸಕರ ಹಕ್ಕು. ಅದನ್ನು ತಡೆಹಿಡಿಯಲು ಸಾಧ್ಯವಿಲ್ಲ – ಬಿಜೆಪಿ ಮುಖಂಡ ಗೋವಿಂದ ಕಾರಜೋಳ

12.20ಸ್ಪೀಕರ್‌ ಆಗಿ ಮುಂದುವರಿಯಲು ಇಷ್ಟವಿಲ್ಲ

‌ನನಗೆ ಸ್ಪೀಕರ್‌ ಆಗಿ ಮುಂದುವರಿಯಲು ಇಷ್ಟವಿಲ್ಲ. ಎಲ್ಲವನ್ನು ಸೋಮವಾರ ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ಸ್ಪಷ್ಟಪಡಿಸುತ್ತೇನೆ– ಸ್ಪೀಕರ್ರಮೇಶ್‌ ಕುಮಾರ್

12.05ಸ್ಪೀಕರ್ ರಮೇಶ್‌ ಕುಮಾರ್‌ ಅವರು ನೀಡಿದ್ದು ಅವಸರ ತೀರ್ಪು..

ರಮೇಶ್‌ ಕುಮಾರ್ ಅವರ ತೀರ್ಪನ್ನು ಕೇಳಿದೆ. ಯಾವ್ಯಾವ ಸನ್ನಿವೇಶದಲ್ಲಿ ಏನೇನು ಆಯ್ತು, ಸರ್ಕಾರ ಯಾರ ಪರವಾಗಿತ್ತು. ಇವೆಲ್ಲವನ್ನು ಸುದೀರ್ಘವಾಗಿ ಯೋಚಿಸಬೇಕಿತ್ತು. ಏಕೆಂದರೆ ಇದು ರಾಜಕಾರಣ. ಯಾವುದೋ ಶಿಕ್ಷೆ ಕೊಡುವ ಕೋರ್ಟ್‌ ಅಲ್ಲ. ಅಲ್ಲಿ ನಮ್ಮ ರಾಜೀನಾಮೆ ವಿಚಾರ ಹೆಚ್ಚು ಪ್ರಸ್ತಾಪ ಆಗಿಲ್ಲ. ಇದು ಬಹಳ ಅವಸರದಲ್ಲಿ, ಅನರ್ಹತೆಯ ಆಧಾರದ ಮೇಲೆ ತೀರ್ಪು ನೀಡಿದ್ದಾರೆ. ಸ್ಪೀಕರ್‌ ರಮೇಶ್‌ ಕುಮಾರ್‌ ಅವರದ್ದು ಅವಸರದ ತೀರ್ಪು ಎಂದು ನನಗೆ ಅನ್ನಿಸುತ್ತದೆ. ಸುಪ್ರೀಂಕೋರ್ಟ್‌ನಲ್ಲಿ ನಮ್ಮ ವಾದವನ್ನು ನಾವು ಮಂಡಿಸುತ್ತೇವೆ.–ಎಚ್‌.ವಿಶ್ವಾನಾಥ್‌

11.5715ನೇ ವಿಧಾನಸಭೆ ವಿಸರ್ಜನೆಯಾಗುವವರೆಗೂ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್‌ ಆದೇಶ ಮಾಡಿದರು.

11.56ಶ್ರೀಮಂತ ಬಾಳಾಸಾಹೇಬ್ ಪಾಟೀಲ್ (ಕಾಗವಾಡ) ಅವರನ್ನೂ ಅನರ್ಹಗೊಳಿಸಲಾಗಿದೆ.

11.56ಎ.ಎಚ್.ವಿಶ್ವನಾಥ್ (ಹುಣಸೂರು), ಕೆ.ಸಿ.ನಾರಾಯಣಗೌಡ (ಕೆ.ಆರ್.ಪೇಟೆ), ಕೆ.ಗೋಪಾಲಯ್ಯ (ಮಹಾಲಕ್ಷ್ಮಿ ಲೇಔಟ್) ಅವರನ್ನು ಅನರ್ಹಗೊಳಿಸಲಾಗಿದೆ.

11.53ಪ್ರತಾಪಗೌಡ ಪಾಟೀಲ್ - ಮಸ್ಕಿ, ಬಿ.ಸಿ ಪಾಟೀಲ್ - ಹಿರೇಕೆರೂರು, ಶಿವರಾಮ್ ಹೆಬ್ಬಾರ್ - ಯಲ್ಲಾಪುರ, ಎಸ್.ಟಿ. ಸೋಮಶೇಖರ್ - ಯಶವಂತಪುರ, ಭೈರತಿ ಬಸವರಾಜು - ಕೆ.ಆರ್.ಪುರ, ಆನಂದ್ ಸಿಂಗ್ - ವಿಜಯನಗರ, ಬಳ್ಳಾರಿ, ಆರ್.ರೋಷನ್ ಬೇಗ್ - ಶಿವಾಜಿನಗರ, ಮುನಿರತ್ನ - ರಾಜರಾಜೇಶ್ವರಿ ನಗರ, ಕೆ. ಸುಧಾಕರ್ - ಚಿಕ್ಕಬಳ್ಳಾಪುರ, ಎಂ.ಟಿ.ಬಿ. ನಾಗರಾಜ್ - ಹೊಸಕೋಟೆ ಇವರನ್ನು ಅನರ್ಹಗೊಳಿಸಲಾಗಿದೆ

11.50ಬೇರೆ ಬೇರೆ ರಾಜ್ಯಗಳಲ್ಲಿ ಈ ರೀತಿಯ ಸ್ಥಿತಿಯಿದ್ದಾಗ ಏನು ಕ್ರಮಕೈಗೊಂಡಿದ್ದಾರೆ ಎನ್ನುವುದನ್ನು ಪರಿಶೀಲಿಸಿ, ತಮಿಳುನಾಡು ರಾಜ್ಯಪಾಲರು ತೆಗೆದುಕೊಂಡ ತೀರ್ಪನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ಕೈಗೊಂಡಿದ್ದೇನೆ

11.46ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌, ಕುಮಾರಸ್ವಾಮಿ ಸಲ್ಲಿಸಿದ ಅನರ್ಹತೆಯ ಅರ್ಜಿಗಳು

11.46ಸ್ಪೀಕರ್ ಆಗಿರುವ ಕಾರಣಕ್ಕೆ ನನ್ನ ಮೇಲೆ ಮಾನಸಿಕ ಒತ್ತಡ ಹಾಕಲಾಗಿದೆ. ಖಿನ್ನನಾಗಿದ್ದಾನೆ. ನನ್ನ ವೈಯಕ್ತಿಕ ಜೀವನದಲ್ಲಿ ತುಳಸಿದಾಸಪ್ಪ, ಅಬ್ದುಲ್ ನಜೀರ್ ಸಾಬ್, ಬಿ.ಎ.ಮೊಯಿದ್ದೀನ್, ಎ.ಕೆ.ಸುಬ್ಬಯ್ಯ ಅವರಂಥವರಿಂದ ನಾನು ಪ್ರಭಾವಿತನಾಗಿದ್ದೇನೆ. ನನ್ನನ್ನು ರೂಪಿಸಿದವರು ಅವರು. ನನ್ನ ನಾಲ್ಕು ದಶಕಗಳ ಜೀವನದ ಪ್ರಮುಖ ಘಟ್ಟ, ಬಹುಶಃ ಕೊನೆಯ ಘಟ್ಟವೂ ಆಗಬಹುದು. ಅತ್ಯಂತ ಭಯ, ಗೌರವ, ಜವಾಬ್ದಾರಿಯನ್ನು ಹೊಟ್ಟೆಯಲ್ಲಿಟ್ಟುಕೊಂಡು ನಾನು ಈ ತೀರ್ಮಾನಕ್ಕೆ ಬಂದಿದ್ದೇನೆ.

11.45ಪಕ್ಷಾಂತರ ನಿಷೇಧ ಕಾಯ್ದೆ ಸಂಸತ್ತಿನಲ್ಲಿ ಮಂಡನೆಯಾದಾಗ ಜೈಪಾಲ್ ರೆಡ್ಡಿ ಮನದ ಮಾತುಗಳನ್ನು ಹೇಳಿದ್ದರು. ಜೈಪಾಲ್‌ರೆಡ್ಡಿ ಅವರನ್ನು ನೆನೆದು ಕಣ್ಣೀರಿಟ್ಟ ಸ್ಪೀಕರ್ ರಮೇಶ್‌ ಕುಮಾರ್. ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ.ಆಡ್ವಾಣಿ, ಮುಧುಲಿಮೆ, ಮೋಹನ್ ಕುಮಾರ್ ಮಂಗಳಂ, ಇಂದ್ರಜಿತ್ ಗುಪ್ತ, ಚಂದ್ರಜಿತ್ ಯಾದವ್, ಜಾರ್ಜ್ ಫರ್ನಾಂಡಿಸ್ ಅಂಥವರು ಈ ದೇಶದಲ್ಲಿ ಇದ್ರಾ ಅಂತ ನನಗೆ ಅನ್ನಿಸುತ್ತೆ.

11.43ಜೈಪಾಲ್‌ ರೆಡ್ಡಿ ನಿಧನಕ್ಕೆ ಸಂತಾಪ ಸೂಚನೆ

ಇದು ನನಗೆ ಅತ್ಯಂತ ಖೇದದ ದಿನ. ನನ್ನ ಹಿರಿಯ ಸೋದರರಂತಿದ್ದ ಜೈಪಾಲ್ ರೆಡ್ಡಿ ನಿಧನರಾಗಿದ್ದಾರೆ. ನನಗೆ ತೀವ್ರ ಬೇಸರವಾಗಿದೆ. ಅವರು ಒಬ್ಬ ಒಳ್ಳೆಯ ಮನುಷ್ಯ, ಸಂಸದೀಯಪಟು ಆಗಿದ್ದರು.

11.40ಉಳಿದ ಅತೃಪ್ತ ಶಾಸಕಅನರ್ಹತೆಗೆ ಸಂಬಂಧಿಸಿದ ಅರ್ಜಿಗಳನ್ನು ಇತ್ಯರ್ಥಪಡಿಸುವ ಅನಿವಾರ್ಯತೆ ಬಂದಿದೆ. ಸೋಮವಾರದಿಂದಅಧಿವೇಶನದ ತರಾತುರಿಯಲ್ಲಿರುವುದರಿಂದ ಅದನ್ನು ಇತ್ಯರ್ಥಪಡಿಸಲು ಭಾನುವಾರತುರ್ತು ಸುದ್ದಿಗೋಷ್ಠಿ ಕರೆದಿದ್ದೇವೆ.

11.36ಮುಖ್ಯಮಂತ್ರಿಯ ಸಲಹೆ ಮೇರೆಗೆ ಸೋಮವಾರ ಬೆಳಿಗ್ಗೆ 11 ಗಂಟೆಗೆ ಅಧಿವೇಶನ ಕರೆಯಲಾಗಿದೆ.ವಿಶ್ವಾಸಮತ ಯಾಚನೆ, ಧನಿವಿನಿಯೋಗ ಮಸೂದೆ ಮೇಲೆ ಚರ್ಚೆ, ಪರಿಶೀಲನೆ ಮತ್ತು ಮತಕ್ಕೆ ಹಾಕುವ ವಿಚಾರವನ್ನು ಸ್ಪಷ್ಟವಾಗಿ ನಮೂದಿಸಿ ನಮ್ಮ ಕಾರ್ಯದರ್ಶಿಯ ಮೂಲಕ ಎಲ್ಲಾಸದಸ್ಯರಿಗೆ ಸೂಚನ ಪತ್ರವನ್ನುಕಳುಹಿಸಿಕೊಟ್ಟಿದ್ದೇನೆ. ಇದಕ್ಕಾಗಿ ನಮ್ಮ ಕಾರ್ಯಾಲಯ ಶನಿವಾರ, ಭಾನುವಾರ ಎರಡೂ ದಿನ ಕೆಲಸ ಮಾಡಿದ್ದಾರೆ.

11.34ಅಧಿವೇಶನ ಕರೆಯಲು ಯಡಿಯೂರಪ್ಪ ಮನವಿ

ಮುಖ್ಯಮಂತ್ರಿ ಯಡಿಯೂರಪ್ಪ ನನ್ನನ್ನು ಸಂಪರ್ಕಿಸಿ, 31ರಂದು ಸರ್ಕಾರದ ಧನವಿನಿಯೋಗ ಮಸೂದೆ ಅಂತ್ಯಗೊಳ್ಳಲಿದೆ. ಹಾಗಾಗಿ ಧನಿವಿನಿಯೋಗ ಮಸೂದೆ ಮತ್ತು ಇತರ ಬೇಡಿಕೆಗಳ ಮೇಲೆಮತಯಾಚನೆ ಆಗಬೇಕಿದೆ. ನಾನೂ ಸಭೆಯ ವಿಶ್ವಾಸಮತ ಪಡೆಯಬೇಕಿದೆ. ಆದ ಕಾರಣ ಸೋಮವಾರ ಅಧಿವೇಶನ ಕರೆಯಲು ಅವಕಾಶ ನೀಡಬೇಕು ಎಂದು ಕೋರಿದ್ದಾರೆ.

11.34ಪತ್ರಿಕಾಗೋಷ್ಠಿಪ್ರಾರಂಭ

11.20ಕುತೂಹಲ ಮೂಡಿಸಿದೆ ಸ್ಪೀಕರ್‌ ರಮೇಶ್‌ ಕುಮಾರ್‌ ದಿಢೀರ್‌ ಪತ್ರಿಕಾಗೋಷ್ಠಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT