ಸಿಯುಕೆ ಆವರಣದಲ್ಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

7
ತಡವಾಗಿ ಬೆಳಕಿಗೆ ಬಂದ ಪ್ರಕರಣ; ಇಬ್ಬರು ಪೊಲೀಸರ ವಶಕ್ಕೆ

ಸಿಯುಕೆ ಆವರಣದಲ್ಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

Published:
Updated:

ಕಲಬುರ್ಗಿ: ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಆವರಣದಲ್ಲೇ ಸ್ನಾತಕೋತ್ತರ ಪದವಿಯ 4ನೇ ಸೆಮಿಸ್ಟರ್ ವಿದ್ಯಾರ್ಥಿನಿ ಮೇಲೆ ಈಚೆಗೆ ಅತ್ಯಾಚಾರ ನಡೆದಿದೆ.

ವಿದ್ಯಾರ್ಥಿನಿ ವಿಶ್ವವಿದ್ಯಾಲಯ ಆವರಣದಲ್ಲಿನ ಹಾಸ್ಟೆಲ್‌ನಲ್ಲಿ ವಾಸವಾಗಿದ್ದರು. ಡಿ.30ರ ಸಂಜೆ 7.30ಕ್ಕೆ ಘಟನೆ ನಡೆದಿದೆ. ಈ ಸಂಬಂಧ ಹಾಸ್ಟೆಲ್‌ನಲ್ಲಿ ಅಡುಗೆ ಕೆಲಸ ಮಾಡುವ ಅನಿಲ್‌ ಹಾಗೂ ಗುರು ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಅಡುಗೆ ತಯಾರಾಗಿರುವ ಬಗ್ಗೆ ಕೇಳಿಕೊಂಡು ಬರಲು ವಿದ್ಯಾರ್ಥಿನಿ ಮೆಸ್‌ಗೆ ಹೋಗಿದ್ದರು. ಅಲ್ಲಿದ್ದ ಅನಿಲ್‌ ಅಡುಗೆ ಇನ್ನೂ ವಿಳಂಬವಾಗುತ್ತದೆ ಎಂದು ಹೇಳಿದ್ದಾನೆ. ಮಾತನಾಡುತ್ತ ವಿದ್ಯಾರ್ಥಿನಿಯ ಹತ್ತಿರ ಬಂದು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ವಿದ್ಯಾರ್ಥಿನಿ ಅವನನ್ನು ತಳ್ಳಿ ಹೊರಬಂದಿದ್ದಾಳೆ.

ಹೊರಗೆ ನಿಂತಿದ್ದ ಇನ್ನೊಬ್ಬ ಕೆಲಸಗಾರ ಗುರು ವಿದ್ಯಾರ್ಥಿನಿಯನ್ನು ಹಾಸ್ಟೆಲ್‌ವರೆಗೂ ಸುರಕ್ಷಿತವಾಗಿ ಬಿಟ್ಟು ಬರುವುದಾಗಿ ನಂಬಿಸಿ ಕರೆದುಕೊಂಡು ಹೋಗಿದ್ದಾನೆ. ದಾರಿ ಮಧ್ಯೆ ಯಾರೂ ಇಲ್ಲದ್ದನ್ನು ಗಮನಿಸಿ ರಸ್ತೆ ಪಕ್ಕಕ್ಕೆ ಎಳೆದೊಯ್ದು ಅತ್ಯಾಚಾರ ಮಾಡಿದ್ದಾನೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

640 ಎಕರೆ ವಿಸ್ತಾರವಾದ ಕ್ಯಾಂಪಸ್‌ನಲ್ಲಿ 1,800ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಸುರಕ್ಷತೆ ಇಲ್ಲವಾಗಿದೆ. ಭದ್ರತಾ ಸಿಬ್ಬಂದಿ ಹೆಚ್ಚಿಸಬೇಕು ಎಂದು ವಿದ್ಯಾರ್ಥಿಗಳು ಈಚೆಗೆ ಧರಣಿ ಮಾಡಿದ್ದರು.

**

ಅತ್ಯಾಚಾರ ಘಟನೆ ತಿಳಿದ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ವೈದ್ಯಕೀಯ ಪರೀಕ್ಷೆಗೂ ಒಳಪಡಿಸಲಾಗಿದೆ. ವಿಶ್ವವಿದ್ಯಾಲಯ ‘ಫಸ್ಟ್‌ ಕಮಿಟಿ’ ಮುಂದೆ ಕೂಡ ವಿದ್ಯಾರ್ಥಿನಿ ಏನನ್ನೂ ಹೇಳಿಲ್ಲ

-ಪ್ರೊ.ಎಂ.ಮಹೇಶ್ವರಯ್ಯ ಕುಲಪತಿ, ಸಿಯುಕೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !