ಭಾನುವಾರ, ನವೆಂಬರ್ 17, 2019
29 °C

ಬಾಲಕಿಗೆ ಲೈಂಗಿಕ ದೌರ್ಜನ್ಯ: ಜೀವಾವಧಿ ಶಿಕ್ಷೆ

Published:
Updated:

ದಾವಣಗೆರೆ: ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ಬಾಲಕಿಯನ್ನು ಶಾಲೆಯ ಹಿಂಭಾಗಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದ ಯುವಕನಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಟ್‌ ಹಾಗೂ ಪೋಕ್ಸೊ ವಿಶೇಷ ಕೋರ್ಟ್‌ ಜೀವಾವಧಿ ಕಠಿಣ ಕಾರಾಗೃಹ ಮತ್ತು ₹ 65 ಸಾವಿರ ದಂಡ ವಿಧಿಸಿವೆ.

ಹಳ್ಳಿಮಲ್ಲಾಪುರದ ಮಹಾಂತೇಶ ನಾಯ್ಕ (23) ಶಿಕ್ಷೆಗೆ ಒಳಗಾದ ಯುವಕ. ನ್ಯಾಯಾಧೀಶೆ ಎಸ್‌. ನಾಗಶ್ರೀ ಈ ಶಿಕ್ಷೆ ವಿಧಿಸಿ ತೀರ್ಪಿತ್ತಿದ್ದಾರೆ.

ಸರ್ಕಾರದ ಪರವಾಗಿ ಶೌಕತ್‌ ಅಲಿ ವಾದಿಸಿದ್ದರು.

ಪ್ರತಿಕ್ರಿಯಿಸಿ (+)