ಗುರುವಾರ , ಡಿಸೆಂಬರ್ 5, 2019
19 °C

ವಿಡಿಯೊ| ಶುದ್ಧ ಕುಡಿಯುವ ನೀರಿಗಾಗಿ ಸಗಣಿ ಎರಚಿಕೊಂಡು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಜಿಲ್ಲೆಯ ಮಾನ್ವಿ ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಜನಶಕ್ತಿ ಕೇಂದ್ರದ ಕಾರ್ಯಕರ್ತರು ಮೈಮೇಲೆ ಸೆಗಣಿ ಎರಚಿಕೊಂಡು ಪ್ರತಿಭಟನೆ ನಡೆಸಿದರು.

ಶಾಶ್ವತ ಕುಡಿಯುವ ನೀರಿನ‌ ಯೋಜನೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸುವುದು, ಶುದ್ಧ ಕುಡಿಯುವ ನೀರು ಪೂರೈಕೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜನಶಕ್ತಿ ಕೇಂದ್ರದ ಕಾರ್ಯಕರ್ತರು ಕಳೆದ 55 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದರು. 

ಧರಣಿಗೆ ಸ್ಪಂದನೆ ಮಾಡದಿರುವುದಕ್ಕೆ ನೊಂದು ಕಾರ್ಯಕರ್ತರು ಮೈಮೇಲೆ ಸಗಣಿ ಎರಚಿಕೊಂಡು ಪ್ರತಿಭಟನೆ ಕೈಗೊಂಡಿದ್ದಾರೆ. ಮುಖಂಡರಾದ ಪ್ರಭುರಾಜ ಕೊಡ್ಲು, ಎಸ್.ಎಂ.ಶಾನವಾಜ್, ಹನುಮಂತ ಕೋಟೆ, ನುಸ್ರತ್, ಮೈನುದ್ದೀನ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

ಆನಂತರ ಪ್ರತಿಭಟನಾಕಾರರು ತಹಶಿಲ್ದಾರ್ ಅಮರೇಶ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು