ಗುರುವಾರ , ಜನವರಿ 23, 2020
27 °C
ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಮಾಹಿತಿ

ಆರ್‌ಬಿಐ ನಿರ್ಬಂಧ: ಇಂದು ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಠೇವಣಿದಾರರು ತಮ್ಮ ಖಾತೆಯಿಂದ ಹಣ ವಾಪಸು ಪಡೆಯುವುದಕ್ಕೆ ನಿರ್ಬಂಧ ಹೇರಿರುವ ಕುರಿತಂತೆ‌ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಅಧಿಕಾರಿಗಳ ಜೊತೆ ಚರ್ಚಿಸಿದ ಬಳಿಕ ಗ್ರಾಹಕರಿಗೆ ಮಾಹಿತಿ ನೀಡಲಾಗುವುದು' ಬಸವನಗುಡಿಯಲ್ಲಿರುವ ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕಿನ ಮುಖ್ಯ ಸಲಹೆಗಾರರು ತಿಳಿಸಿದರು.

‘ಬ್ಯಾಂಕಿನ ಠೇವಣಿದಾರರು ಮತ್ತು ಸದಸ್ಯರ ಸಭೆ ನೆಟ್ಟಕಲ್ಲಪ್ಪ ವೃತ್ತದಲ್ಲಿರುವ ಗಣೇಶನ ಗುಡಿ ಪಕ್ಕದಲ್ಲಿರುವ ದ್ವಾರಕ ಭವನದಲ್ಲಿ ಸೋಮವಾರ (ಡಿ. 13) ಸಂಜೆ 6 ಗಂಟೆಗೆ ನಡೆಯಲಿದೆ. ಗ್ರಾಹಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ’ ಎಂದೂ ಹೇಳಿದರು.

ವಹಿವಾಟು ನಡೆಸುವ ಕುರಿತಂತೆ ಕೆಲವು ನಿರ್ಬಂಧಗಳನ್ನು ವಿಧಿಸಿ ಬ್ಯಾಂಕಿಗೆ ಆರ್‌ಬಿಐ ಇದೇ 10ರಂದು ನೋಟಿಸ್‌ ನೀಡಿತ್ತು. ಈ ನೋಟಿಸ್ ಅನ್ನು ಆಡಳಿತ ಮಂಡಳಿ, ಬ್ಯಾಂಕಿನ ಗೋಡೆಯಲ್ಲಿ ಅಂಟಿಸುವ ಜೊತೆಗೆ, ಗ್ರಾಹಕರ ಮೊಬೈಲ್‌ಗಳಿಗೆ ಸಂದೇಶ ಕಳುಹಿಸಿತ್ತು.

ಗ್ರಾಹಕರ ಹಣ ಭದ್ರವಾಗಿದೆ. ಸಾಲ ಪಡೆದವರೂ ಸಹ ಪ್ರಾಮಾಣಿಕವಾಗಿ ಹಿಂದಿರುಗಿಸುತ್ತೇವೆಂದು ತಿಳಿಸಿದ್ದಾರೆ ಕೆ. ರಾಮಕೃಷ್ಣ, ಅಧ್ಯಕ್ಷ, ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು