ಆರ್‌ಸಿಯು: ನೂತನ ಕುಲಪತಿ ರಾಮಚಂದ್ರಗೌಡ

ಬುಧವಾರ, ಜೂಲೈ 17, 2019
26 °C

ಆರ್‌ಸಿಯು: ನೂತನ ಕುಲಪತಿ ರಾಮಚಂದ್ರಗೌಡ

Published:
Updated:

ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೂತನ ಕುಲಪತಿಯನ್ನಾಗಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಸಚಿವ (ಆಡಳಿತ) ಪ್ರೊ.ಎಂ. ರಾಮಚಂದ್ರಗೌಡ ಅವರನ್ನು ರಾಜ್ಯಪಾಲ ವಜೂಭಾಯಿ ಆರ್.ವಾಲಾ ಸೋಮವಾರ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಅವರ ಅಧಿಕಾರದ ಅವಧಿ 4 ವರ್ಷಗಳ ಅವಧಿವರೆಗೆ ಇರುತ್ತದೆ ಎಂದು ತಿಳಿಸಿದ್ದಾರೆ.

ಪ್ರೊ.ಎಸ್.ಬಿ. ಹೊಸಮನಿ ಅವರ ಅಧಿಕಾರದ ಅವಧಿ ಜೂನ್ 16ರಂದು ಮುಗಿದಿತ್ತು. ಹಿರಿಯ ಡೀನ್ ಪ್ರೊ.ಎಸ್.ಎಂ. ಹುರಕಡ್ಲಿ ಪ್ರಭಾರ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಶೋಧನಾ ಸಮಿತಿಯ ಶಿಫಾರಸು ಆಧರಿಸಿ, ಕೆಲವೇ ದಿನಗಳಲ್ಲಿ ನೂತನ ಕುಲಪತಿ ಆಯ್ಕೆ ಪ್ರಕ್ರಿಯೆ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !